ವಿನಯ, ವಿಧೇಯ ಗುಣದಿಂದ ಸಮಾನತೆ

PRATHAPPHOTOS.COM
Advertisement

ಆಧುನಿಕ ಕಾಲದಲ್ಲಿ ಸಮಾನತೆ ಎಂಬುದು ಸಹಜವಾದ ಮತ್ತು ಎಲ್ಲರಲ್ಲಿ ಎಲ್ಲ ಕಡೆಗೂ ವಿಪುಲವಾಗಿ ಸಾಮಾಜಿಕ ಶಬ್ದವಾಗಿ ಬಳಕೆಯಾಗುತ್ತಲಿದೆ. ಸಮಾನತೆ ಎಂದರೆ ಒಬ್ಬರನ್ನ ಮೇಲು ಕೀಳು ಮಾಡಿ ಜೀವನ ನಡೆಸುವುದಲ್ಲ. ಶಾಸ್ತ್ರವು ಮನುಷ್ಯನ ಹಿತಕ್ಕಾಗಿ ಏಳಿಗೆಗಾಗಿ ವಿನಯವನ್ನು ಕಲಿಸಿದೆ. ಅಂತೆಯೇ ದೇವರು, ಭಕ್ತ, ಗುರುಗಳು ಶಿಷ್ಯ… ಹಿರಿಯರು ಕಿರಿಯರು ಇವರೆಲ್ಲರೂ ಸಮಾನರೂ ಎಂದು ಸ್ಥೂಲವಾಗಿ ಪರಿಗಣಿಸಬೇಕಿಲ್ಲ. ಅವರದೇ ಆದ ಯೋಗ್ಯತೆ ಇದ್ದೇ ಇದೆ. ಅದನ್ನು ಸಂಪಾದಿಸಿಕೊಳ್ಳಬೇಕು. ಎಲ್ಲರಿಗೂ ವಿಹಿತವಾಗಿ ದೊರೆಯುವ ಅವಕಾಶ ಮತ್ತು ಸಾಮಾಜಿಕ ಗೌರವ ಭಿನ್ನವಾಗಿಯೇ ಇರುತ್ತದೆ ಎಂಬುದನ್ನು ಮರೆಯಕೂಡದು ಆದರೆ ಎಲ್ಲರಿಗೂ ಈ ಚಕ್ರದಲ್ಲಿ ಬಂದು ಹೋಗಲೇಬೇಕು.
ಇಂದು ಗುರುವಾದವ ಹಿಂದೆ ಶಿಷ್ಯನು ಆಗಿದ್ದ ಎಂಬುದನ್ನು ಮರೆಯಬಾರದು. ಶಿಷ್ಯನಾದಾಗ ಈ ಗುರುವು ತನ್ನ ಗುರುವಿಗೆ ಬಾಗಿಯೇ ನಡೆಯಬೇಕು. ಹಾಗೆ ಹೆಂಡತಿಯು ಗಂಡನಿಗೆ ತಲೆಬಾಗಿ ನಡೆಲೇಬೇಕು. ಹಾಗಿದ್ದರೆ ಮಾತ್ರ ಮಕ್ಕಳು ಅಪ್ಪನ ಮಾತು ಅಮ್ಮನ ಮಾತು ಮನೆಯಲ್ಲಿ ಕೇಳುತ್ತಾರೆ. ಚೆನ್ನಾಗಿ ಬಾಳುವ ಕುಟುಂಬ ಆಗಬೇಕು ಎಂದರೆ ಅಲ್ಲಿ ವಿನಯಿರಬೇಕು. ಗಂಡು ದೊಡ್ಡವಳು ಹೆಣ್ಣು ಚಿಕ್ಕವಳು ಎಂಬ ಭಾವವಿಲ್ಲ.. ಏಕೆಂದರೆ ಮಗ ತಾಯಿಗೆ ಎಂದು ಚಿಕ್ಕವನೇ. ಇಲ್ಲಿ ಹೆಣ್ಣು ಶ್ರೇಷ್ಠವಾಗುತ್ತಾಳೆ. ಅವನು ಗಂಡಾದರೂ ತನ್ನ ತಾಯಿಯನ್ನು ಹೆಣ್ಣಿಗೆ ಅವನು ದಾಸನೇ ತಲೆಯಾಗಿ ನಡೆಯಲೇಬೇಕು. ಇದೆಲ್ಲ ಸಂಸ್ಕೃತಿಯನ್ನು ಬರೆಸಿದವ ಶ್ರೀಮನ್ನಾರಾಯಣ… ನಾರಾಯಣನು ಸ್ತ್ರೀ ಹೌದು ಪುರುಷನೂ ಹೌದು. ಭಗವಂತನಿಗೆ ಸ್ತ್ರೀರೂಪಗಳು ಇವೆ ಪುರುಷ ರೂಪಗಳು ಇವೆ. ಸ್ತ್ರೀ, ಪುರುಷನು ಆಗಿ ಮೆರೆಯುವ ಅವನು ನಾರಾಯಣನು ಹೌದು ನಾರಾಯಣಿಯು ಹೌದು… ಪುರುಷನಾದರೂ ತಾಯಿಗೆ, ಗುರು ಪತ್ನಿಗೆ ತನ್ನ ಹಿರಿಯರಾದ ಮಾತೃ ಸ್ವರೂಪಿಗಳಿಗೆ ತಲೆ ಬಾಗಲೇಬೇಕು ವಿನೀತರಾಗಿರಬೇಕು ಎಂದು ಶಾಸ್ತçಗಳು ಹೇಳುತ್ತವೆ. ಆದ್ದರಿಂದ ಗಂಡ ಹೆಂಡತಿ ಪರಸ್ಪರ ಅಧೀನವಾಗಿರಬೇಕು ವಿನೀತರಾಗಿರಬೇಕು ಎಂಬ ವ್ಯವಸ್ಥೆ ವಿನಯದ ಪದ್ಧತಿ, ಜೀವನದಲ್ಲಿ ಇದ್ದರೆ ಎಲ್ಲರೂ ಸುಖವಾಗಿ ಇರುವುದಕ್ಕೆ ಸಾಧ್ಯ ಎಂದು ಶಾಸ್ತ್ರದ ಸಂದೇಶ ಎಂದು ತಿಳಿದು ಪರಿಪಾಲಿಸಬೇಕು. ಇದು ಪಕ್ಷಪಾತದ ಮಾತುಗಳು ಎಂದು ಯಾರೂ ತಿಳಿಯಬಾರದು.