ವಿವಾಹಿತೆಗೆ ಬ್ಲ್ಯಾಕ್‌ಮೇಲ್: ಗ್ರಾ.ಪಂ. ಮಾಜಿ ಸದಸ್ಯ ಸೆರೆ

ಐವರ ಬಂಧನ
Advertisement

ಮಂಗಳೂರು: ವಿವಾಹಿತೆಗೆ ಆಮಿಷವೊಡ್ಡಿ ಆಕೆಯೊಂದಿಗೆ ದೇಹಸಂಪರ್ಕ ಹೊಂದಿ ಆಕ್ಷೇಪಾರ್ಹ ಫೋಟೋಗಳನ್ನು ಕ್ಲಿಕ್ಕಿಸಿ ಹಣಕ್ಕಾಗಿ ಪೀಡಿಸಿದ ಆರೋಪದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯನನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.
ಪ್ರಶಾಂತ್ ಭಟ್ ಮಾಣಿಲ (೩೫) ಬಂಧಿತ ಆರೋಪಿ. ಪುತ್ತೂರಿನ ಆರ್ಲಪದವು ನಿವಾಸಿಯಾಗಿದ್ದ, ಸುಬ್ರಹ್ಮಣ್ಯದಲ್ಲಿ ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಶಿರಸಿ ಮೂಲದ ೨೮ ರ ಹರೆಯದ ವಿವಾಹಿತ ಮಹಿಳೆ ಸಾಮಾಜಿಕ ತಾಣದ ಮೂಲಕ ಪರಿಚಯವಾಗಿದ್ದು, ಸಂಗೀತದ ಕ್ಲಬ್ ಹೌಸ್ ಮೂಲಕ ಸ್ನೇಹ ಮುಂದುವರಿಸಿಕೊಂಡು ಆರ್ಕೆಸ್ಟ್ರಾದಲ್ಲಿ ಹಾಡಲು ದೊಡ್ಡ ಮಟ್ಟದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಸ್ನೇಹ ಮುಂದುವರಿದು ಆಕೆಯೊಂದಿಗೆ ಶಿರಸಿಯ ಲಾಡ್ಜ್ ವೊಂದರಲ್ಲಿ ಇಬ್ಬರೂ ದೈಹಿಕ ಸಂಪರ್ಕ ಹೊಂದಿದ್ದಾರೆ. ಈ ವೇಳೆ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನೇ ಬ್ಲಾಕ್ ಮೇಲ್ ಮಾಡಲು ಬಳಸಿಕೊಂಡಿದ್ದಾನೆ.
ಫೋಟೋಗಳನ್ನು ಮಹಿಳೆಯ ಪತಿ ಮತ್ತು ತಾಯಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದು, ಕೊನೆಗೂ ತಾಯಿಯ ಮೊಬೈಲ್‌ಗೆ ಫೋಟೋ ಕಳುಹಿಸಿದ್ದಾನೆ. ಸಂತ್ರಸ್ತೆ ವಿಚಾರ ಬಹಿರಂಗ ಪಡಿಸದಂತೆ ೨೫ ಸಾವಿರ ರೂಪಾಯಿ ಹಣವನ್ನೂ ನೀಡಿದ್ದು, ಸಾಲದ್ದಕ್ಕೆ ೭ ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಎಂದು ದೂರಿನಲ್ಲಿ ಹೇಳಿಕೊಳ್ಳಲಾಗಿದೆ.
ಕಾರವಾರ ಮಹಿಳಾ ಪೊಲೀಸ್ ಠಾಣೆಗೆಗೆ ನೊಂದ ಮಹಿಳೆ ಅತ್ಯಾಚಾರ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ಪ್ರಶಾಂತ್ ಭಟ್ ಕೂಡ ವಿವಾಹಿತನಾಗಿದ್ದು ಪತ್ನಿಯಿಂದ ದೂರವಾಗಿದ್ದ ಎಂದು ತಿಳಿದು ಬಂದಿದೆ.