ವಿಶೇಷ ಅಂಚೆ ಚೀಟಿ, ₹ 75ರೂ ನಾಣ್ಯ, ಬಿಡುಗಡೆ

Advertisement

ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ 75 ರೂ. ನಾಣ್ಯ, ವಿಶೇಷ ಅಂಚೆ ಚೀಟಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದರು. ನೂತನ ಸಂಸತ್​ ಭವನದ ಉದ್ಘಾಟನಾ ದಿನವನ್ನು ಭಾರತದ ಇತಿಹಾಸದಲ್ಲಿ ಸ್ವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ. ಈ ಸಂಸತ್​ ಭವನ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಸಾಕ್ಷಿಯಾಗಿದೆ. ಭಾರತದ ಸಂಸ್ಕೃತಿ ಅನಾವರಣ ಆಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಂದೇಶವನ್ನು ರಾಜ್ಯಸಭಾ ಉಪಸಭಾಪತಿ ಹರಿವಂಶ್​​ ಓದಿದರು.