ವಿಶೇಷ ತಂತ್ರಜ್ಞಾನದ ಪರಿಸರ ಸ್ನೇಹಿ ಬಸ್ಸುಗಳ ಲೋಕಾರ್ಪಣೆ

Advertisement

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ 3ನೇ ಹಂತದಲ್ಲಿ 50 ನೂತನ ಬಸ್ಸುಗಳು ಲೋಕಾರ್ಪಣೆ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧಿಕೃತವಾಗಿ ಚಾಲನೆ ನೀಡಿದರು.

ನಗರದ ಕೇಂದ್ರ ಬಸ್ ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ವಿಶೇಷ ತಂತ್ರಜ್ಞಾನ ಹೊಂದಿರುವ ಪರಿಸರ ಸ್ನೇಹಿ 50ಹೊಸ ಬಸ್ಸುಗಳು ಲೋಕಾರ್ಪಣೆ ಮಾಡಿದರು. ಬಸ್ಸುಗಳು ವಿಶೇಷ ನೋಡುವುದಾದರೆ ಪರಿಸರ ಸ್ನೇಹಿ BS-6, AIS-140 ವಾಹ‌ ಟ್ರ್ಯಾಕಿಂಗ್ ವ್ಯವಸ್ಥೆ, ಪ್ರಯಾಣಿಕರ ಸುರಕ್ಷತೆಗೆ ಸಿಸಿ ಕ್ಯಾಮೆರಾ, ಪ್ಯಾನಿಕ್ ಬಟನ್ ಅಳವಡಿಕೆ ಮಾಡಲಾಗಿದೆ.ಸುಧಾರಿತ ಎಬಿಎಸ್ ವುಳ್ಳ ಬ್ರೇಕಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ವಾಹನ ಸುಸ್ಥಿತ ನಿಯಂತ್ರಣ (EVSC) ಹೊಂದಿದ್ದು ನವೀನ ತಾಂತ್ರಿಕತೆ ಇರುವ ಆನ್ ಬೋರ್ಡಿಂಗ್ ಡೆಗ್ನೊಸ್ಟಿಕನ್_02 ವ್ಯವಸ್ಥೆ ಹೊಂದಿದೆ. ಪ್ರಯಾಣಿಕರಿಗೆ ಆರಾಮದಾಯಕ ಆಸನದ ವ್ಯವಸ್ಥೆ, ಬೆಂಕಿ ಮುನ್ನೆಚ್ಚರಿಕೆ ನೀಡುವ FDS ಸಾಧನ ಕೂಡ ಅಳವಡಿಕೆ ಮಾಡಲಾಗಿದೆ.

ಅಲ್ಲದೇ ರಾಯಬಾಗ ತಾಲೂಕಿನ 04ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಹಾರೂಗೇರಿ ನೂತನ ಬಸ್ ನಿಲ್ದಾಣ ಉದ್ಘಾಟನೆ,ಅಪಘಾತ ರಹಿತ 38ಬಸ್ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕರಾದ ಆಸೀಫ್ ಸೇಠ್, ಬಾಬಾಸಾಹೇಬ್ ಪಾಟೀಲ ಅಶೋಕ ಪಟ್ಟಣ್, ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ, ಎಂಎಲ್ಸಿ ಚೆನ್ನರಾಜ್ ಹಟ್ಟಿಹೊಳಿ,ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂಡಿ ಭರತ್ ಎಸ್ ಸೇರಿ ಹಲವರು ಭಾಗಿಯಾಗಿದ್ದರು.