ವೀಸಾ ಇಲ್ಲದೆ ವಿದೇಶಕ್ಕೆ

Advertisement

ವೀಸಾ ಇಲ್ಲದೆ ಇರಾನ್‌ಗೆ ಹೋಗಲು ಭಾರತವೂ ಸೇರಿದಂತೆ 33 ದೇಶಗಳಿಗೆ ಇರಾನ್ ಸರ್ಕಾರ ಅನುವು ಮಾಡಲು ನಿರ್ಧರಿಸಿದೆ.
ಭಾರತ ಸೇರಿದಂತೆ 33 ಹೊಸ ದೇಶಗಳ ಸಂದರ್ಶಕರಿಗೆ ವೀಸಾ ಅವಶ್ಯಕತೆಗಳನ್ನು ಇರಾನ್ ರದ್ದುಗೊಳಿಸಿದೆ. ಈ ನಿರ್ಧಾರವು ಪ್ರವಾಸೋದ್ಯಮ ಆಗಮನವನ್ನು ಉತ್ತೇಜಿಸುವ ಮತ್ತು ಪ್ರಪಂಚದಾದ್ಯಂತದ ದೇಶಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ ಎಂದು ಇರಾನ್‌ನ ಸಾಂಸ್ಕೃತಿಕ ಪರಂಪರೆ, ಪ್ರವಾಸೋದ್ಯಮ ಮತ್ತು ಕರಕುಶಲ ಸಚಿವ ಎಜ್ಜತೊಲ್ಲಾ ಜರ್ಘಮಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.