ವೈಜ್ಞಾನಿಕವಾಗಿ ಜಾತಿ ಗಣತಿ ಆಗಬೇಕು

ಬಸವ ಜಯಮೃತ್ಯುಂಜಯ ಸ್ವಾಮೀಜಿ
Advertisement

ದಾವಣಗೆರೆ: ಎಲ್ಲಾ ಸಮಾಜಗಳಿಗೂ ಸಾಮಾಜಿಕ ನ್ಯಾಯ ಸಿಗುವ ಹಾಗೆ ವೈಜ್ಞಾನಿಕವಾಗಿ ಅಂಕಿ ಅಂಶಗಳ ಜಾತಿ ಗಣತಿ ಆಗಬೇಕು. ಯಾವುದೇ ದುರುದ್ದೇಶ ಇರಬಾರದು ಎಂದು ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಲಹೆ ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟಿಷರ ಕಾಲದಲ್ಲಿ ಜಾತಿಗಣತಿ ನಡೆದಿದ್ದು, ಅಂದಿನಿAದ ನಡೆದಿಲ್ಲ. ದುರುದ್ದೇಶದ ಕಾರಣದಿಂದ ಬೇರೆ ರಾಜ್ಯಗಳಲ್ಲಿ ಈ ಕೂಗು ಎದ್ದಿದ್ದು, ನಮ್ಮ ರಾಜ್ಯದಲ್ಲಿ ಇದು ದುರುದ್ದೇಶವಾಗಿರದೇ ಸಂವಿಧಾನದ ಆಶಯಕ್ಕೆ ಅನುಗುಣವಾಗಿ, ಸುಪ್ರೀಕೋರ್ಟ್ನ ನೀತಿಗೆ ಅನುಗುಣವಾಗಿ, ಯಾವುದೇ ಸಮುದಾಯಗಳನ್ನು ಗುರಿಯಾಗಿಸದೇ ಮಾಡಿದ್ದೇ ಆದರೆ ದೇಶದ ಪ್ರಗತಿಯಾಗುತ್ತದೆ. ರಾಜ್ಯದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಈಗಾಗಲೇ ನಡೆದಿದೆ ಎಂದರು.

ಸರ್ಕಾರ ಕಾರ್ಯೋನ್ಮುಖವಾಗಲಿ: ಶಾಮನೂರು ಶಿವಶಂಕರಪ್ಪ ಅವರಿಗೆ ಅನೇಕ ಅಧಿಕಾರಿಗಳು ಹೇಳಿರಬಹುದು. ಯಾವುದೇ ಸರ್ಕಾರವಾಗಲೀ ಅಧಿಕಾರಿಗಳ ಪ್ರಾಮಾಣಿಕ, ದಕ್ಷತೆ ಆಧಾರದ ಮೇಲೆ ಆಯಕಟ್ಟಿನ ಜಾಗಗಳಿಗೆ ನಿಯೋಜಿಸಬೇಕು. ಸರ್ಕಾರಗಳು ಬದಲಾದಂತೆ ಜಾತಿ ಕಾರಣಕ್ಕೆ ದೂರ ಇಡುವಂತಹದು ಸರಿಯಲ್ಲ. ದೊಡ್ಡ ಪ್ರಮಾಣದಲ್ಲಿ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಶಾಮನೂರು ಶಿವಶಂಕರಪ್ಪ ಅವರ ನೋವನ್ನು ಸರಿಪಡಿಸಲು ಸರ್ಕಾರ ಕಾರ್ಯೋನ್ಮುಖವಾಗಬೇಕು ಎಂದು ಸಲಹೆ ನೀಡಿದರು.

ಪಂಚಮಸಾಲಿ ಸಮುದಾಯಕ್ಕೆ ೨ ‘ಎ’ ಹಾಗೂ ಲಿಂಗಾಯತ ಜಾತಿಯ ಎಲ್ಲಾ ಒಳಪಂಗಡಗಳನ್ನು ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಪಟ್ಟಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

ಕಳೆದ ಸರ್ಕಾರ ೨ಎ ಮೀಸಲಾತಿ ಘೋಷಿಸಿತ್ತು. ಕೊನೇ ಗಳಿಗೆಯಲ್ಲಿ ನೀತಿ ಸಂಹಿತೆ ಘೋಷಣೆಯಾಯಿತು. ಪ್ರಸ್ತುತ ಸಿದ್ದರಾಮಯ್ಯ ಅವರ ಸರ್ಕಾರಲ್ಲಿ ಅವರನ್ನು ಭೇಟಿಯಾದಾಗ ಬಜೆಟ್ ಮುಗಿದ ಬಳಿಕ ಆಲೋಚಿಸುವೆ ಎಂದಿದ್ದರು. ಆದರೆ ಈವರೆಗೂ ಕಾರ್ಯಗತಗೊಂಡಿಲ್ಲ ಎಂದರು.

ಪAಚಮಸಾಲಿ ಸಮುದಾಯಕ್ಕೆ ೨ ‘ಎ’ ಮೀಸಲಾತಿ ನೀಡಬೇಕು ಹಾಗೂ ಲಿಂಗಾಯತ ಜಾತಿಯ ಎಲ್ಲಾ ಒಳಪಂಗಡಗಳನ್ನು ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಪಟ್ಟಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

ಕಳೆದ ಸರ್ಕಾರ ೨ಡಿ ಮೀಸಲಾತಿ ಘೋಷಿಸಿತ್ತು. ಕೊನೇ ಗಳಿಗೆಯಲ್ಲಿ ನೀತಿ ಸಂಹಿತೆ ಘೋಷಣೆಯಾಯಿತು. ಪ್ರಸ್ತುತ ಸಿದ್ದರಾಮಯ್ಯ ಸರ್ಕಾರ ಆಡಳಿತವಿದ್ದು, ಅವರನ್ನು ಭೇಟಿಯಾದಾಗ ಬಜೆಟ್ ಮುಗಿದ ಬಳಿಕ ಸಭೆ ಕರೆಯುವುದಾಗಿ ಹೇಳಿದ್ದರು. ಆದರೆ ಈವರೆಗೂ ಕಾರ್ಯಗತಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಹೋರಾಟ ಶುರು ಮಾಡಿದ್ದೇವೆ. ನಿಪ್ಪಾಣಿ, ಝಳಕಿ, ಜಮಖಂಡಿ, ಕುಷ್ಟಗಿ ಬಳಿ ಮಾಡಿದ್ದು, ದಾವಣಗೆರೆ ಹಾಗೂ ಧಾರವಾಡದಲ್ಲೂ ಶೀಘ್ರ ಹೋರಾಟ ಮಾಡಲಾಗುವುದು. ಪಂಚಮಸಾಲಿ ಸಮುದಾಯದ ೧೧ ಜನ ಶಾಸಕರು ಇದ್ದು, ಮಂತ್ರಿ ಸ್ಥಾನಕ್ಕಷ್ಟೇ ತೃಪ್ತಿಯಾಗುವುದಿಲ್ಲ. ೨೦೨೪ರೊಳಗೆ ‘೨ಎ’ ಮೀಸಲಾತಿಗೆ ಸೇರಿಸಬೇಕು. ಅಲ್ಲಿಯವರೆಗೆ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.