ಶತಮಾನಕ್ಕೊಬ್ಬ ವಿಶ್ವೇಶ್ವರಯ್ಯ ಹುಟ್ಟಬೇಕು: ಬೊಮ್ಮಾಯಿ

Advertisement

ಬೆಂಗಳೂರು: ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಗ್ರೇಟ್ ವಿಜನರಿ ಆಗಿದ್ದರು. ಭಾರತಕ್ಕೆ ಈಗಲೂ ಅವರ ಅಗತ್ಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಎಫ್ ಕೆಸಿಸಿಐ ವತಿಯಿಂದ ಏರ್ಪಡಿಸಿದ್ದ ಸಂಸ್ಥಾಪಕರ ದಿನಾಚರಣೆ ಹಾಗೂ ಸರ್ ಎಂ.ವಿ. ಸ್ಮಾರಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತ ಒಂದು ವಿಶೇಷವಾಗಿರುವ ದೇಶ ಭಾರತದಂತ ದೇಶ ಇನ್ನೊಂದಿಲ್ಲ. ಭಾರತವನ್ನು ಹುಡುಕಲು ಹೋಗಿ ಬೇರೆ ದೇಶ‌ವನ್ನು ಹುಡುಕಿದರು. ಆದರೆ ಇನ್ನೊಂದು ಭಾರತ ಸಿಗಲಿಲ್ಲ. ಭಾರತದಲ್ಲಿ ಕರ್ನಾಟಕ ವಿಶೇಷ ಇಡೀ ಭಾರತದಲ್ಲಿ ಕರ್ನಾಟಕದಂತ ರಾಜ್ಯ ಇಲ್ಲ. ನಮ್ಮ ಸಂಸ್ಕೃತಿ ನಮ್ಮ‌ ಜನ ಎಲ್ಲರೂ ವಿಶೇಷ. ಇಲ್ಲಿನ ನೀರಿಗೆ, ನೆಲಕ್ಕೆ ಅಷ್ಟೊಂದು ಮಹತ್ವ ಇದೆ. ಕನ್ನಡಿಗರು ಎಲ್ಲಿಯೇ ಹೋದರೂ ಕನ್ನಡದ ಕಂಪು ಹರಡಿ ಸಜ್ಜನಿಕೆಯಿಂದ ಇರುತ್ತಾರೆ. ನಮ್ಮೆಲ್ಲರ ಆದರ್ಶ ಯುಗಪುರುಷ ಗ್ರೇಟ್ ಸನ್ ಆಫ್ ಇಂಡಿಯಾ ವಿಶ್ವೇಶ್ವರಯ್ಯ. ಅವರು ಹುಟ್ಟಿದ ನಾಡಿನಲ್ಲಿ ನಾವು ಹುಟ್ಟಿದ್ದೇವೆ ಎಂದರೆ ನಮ್ಮ ಪುಣ್ಯ. ಸರ್ ಎಂ ವಿ ಅವರು ಮ್ಯಾನ್ ಆಫ್ ಹುಮ್ಯಾನಿಟಿ, ಒಳ್ಳೆಯ ಸಾಧಕರು ಎಂದು ಹೇಳಿದರು.
ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳಿದ್ದರು. ಸಾಧಕನಿಗೆ ಸಾವು ಅಂತ್ಯವಲ್ಲ. ಸಾಧನೆಯ ನಂತರವೂ ಬದುಕುವುದು ಸಾಧನೆ. ಎಂ. ವಿಶ್ವೇಶ್ವರಯ್ಯ ಅವರ ಸಾಧನೆ ಸಾವಿನ ನಂತರವೂ ಇದೆ. ವಿಶ್ವೇಶ್ವರಯ್ಯ ಅವರ ವಿಶ್ಲೇಣಾತ್ಮಕ ಮನಸ್ಸಿತ್ತು ಅದಕ್ಕೆ ಅವರು ಒಬ್ಬ ಒಳ್ಳೆಯ ಎಂಜನೀಯರ್ ಮತ್ತು ವಿಜನರ್ ಆಗಿದ್ದರು. ವಿಶ್ವೇಶ್ವರಯ್ಯ ಏನು ಯೋಚಿಸುತ್ತಿದ್ದರೊ ಅದನ್ನು ಅನುಷ್ಠಾನ ಮಾಡುತ್ತಿದ್ದರು. ವಿಶ್ವೇಶ್ವರಯ್ಯ ವಿಶ್ವಕ್ಕೂ ಮಿಗಿಲಾಗಿ ಬೆಳೆದವರು. ಹೈದರಾಬಾದ್, ಬಿಹಾರ್ ಮಹಾರಾಷ್ಟ್ರ, ಕರ್ನಾಟಕ ಎಲ್ಲಿ ಹೋದರೂ ಅವರ ಕೆಲಸ ಕಾಣಿಸುತ್ತದೆ. ಅವರು ಡ್ಯಾಮ್ ಕಟ್ಟಿದರು, ಕಾರ್ಖಾನೆಗಳನ್ನು ಕಟ್ಟಿದರು. ಕರ್ನಾಟಕ ವಿಶ್ವೇಶ್ವರಯ್ಯ ಹಾಗೂ ಮೈಸೂರು ಮಹಾರಾಜರಂತ ವಿಜನರಿಗಳಿಂದ ಕರ್ನಾಟಕ ಭಾರತದ ಸಿಲಿಕಾನ್ ವ್ಯಾಲಿ ಎಂದು ಗುರುತಿಸುವಂತೆ ಮಾಡಿದೆ. ಅದರ ಮುಂದುವರೆದ ಭಾಗವೇ ಐಟಿ ಬಿಟಿ ಬೆಳವಣಿಗೆಗೆ ಕಾರಣವಾಯಿತು ಎಂದು ಹೇಳಿದರು.
ಪ್ರತಿ ಶತಮಾನಕ್ಕೊಬ್ಬ ವಿಶ್ವೇಶ್ವರಯ್ಯ ಹುಟ್ಟಬೇಕು. ಮಾನವ ಸಮುದಾಯದ ಏಳಿಗೆಗೆ ವಿಶ್ವೇಶ್ವರಯ್ಯ ಅವರ ಅಗತ್ಯ ಇದೆ. ಭಾರತ ಈಗ ವಿಜನರಿ ನಾಯಕ ನರೇಂದ್ರ ಮೋದಿಯಂತ ನಾಯಕನನ್ನು ಹೊಂದಿದೆ. ಹಣವೊಂದರಿಂದ ಎಲ್ಲವೂ ಆಗುವುದಿಲ್ಲ. ವಿಜನರಿ ನಾಯಕ, ದುಡಿಯುವ ಜನ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಮೊದಲು ದುಡ್ಡೇ ದೊಡ್ಡಪ್ಪ ಅಂತ ಇತ್ತು. ಈಗ ದುಡಿಮೆಯೇ ದೊಡ್ಡಪ್ಪ ಆಗಬೇಕು. ವಿಶ್ವೇಶ್ವರಯ್ಯ ಅವರ ಸಾಧನೆಯ ಒಂದು ಪರ್ಸೆಂಟ್ ಸಾಧನೆ ಮಾಡಿದರೂ ನಾವು ಅವರಿಗೆ ಗೌರವ ಕೊಟ್ಟಂತೆ ಆಗುತ್ತದೆ ಎಂದು ಹೇಳಿದರು.
ಇದೇ ವೇಳೆ ವೋಲ್ವೊ ಕಂಪನಿಯ ಎಂಡಿ ಬಾಲಿ ಅವರ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅವರಿಗೆ ಸರ್ ಎಂ.ವಿ ಪ್ರಶಸ್ತಿ ದೊತರೆತಿರುವುದು ಸೂಕ್ತವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೋಲ್ವೊ ಗ್ರುಪ್ ಎಂಡಿ ಕಮಲ್ ಬಾಲಿ ಅವರನ್ನು ಸನ್ಮಾನಿಸಲಾಯಿತು. ರಾಜ್ಯಪಾಲರಾದ ಥಾವರಚಂದ ಗೆಲ್ಹೋತ್, ಎಫ್ ಕೆಸಿಸಿಐ ಅಧ್ಯಕ್ಷ ಬಿ.ವಿ ಗೋಪಾಲರೆಡ್ಡಿ ಹಾಗೂ ಮತ್ತಿತರರು ಹಾಜರಿದ್ದರು.