“ಶಾಂತಿಯುತ ಕರ್ನಾಟಕ” ಸ್ಥಾಪನೆಗೆ ಎಂ ಬಿ ಪಾಟೀಲ್‌ ಮನವಿ

Advertisement

ಕರ್ನಾಟಕದಲ್ಲಿ ಯಾವುದೇ ದ್ವೇಷ ಹರಡದಂತೆ ಘಟನೆಗಳ ಬಗ್ಗೆ ನಿಗಾ ಇರಿಸಲು “ಶಾಂತಿಯುತ ಕರ್ನಾಟಕ” ಎಂಬ ಹೊಸ ಸಹಾಯವಾಣಿಯನ್ನು ಸ್ಥಾಪಿಸಿ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಸಲಹೆ ನೀಡಿದ್ದಾರೆ.
ಈ ಕುರಿತು ಟ್ವೀಟ್‌ ಮಾಡಿರುವ ಅವರು ಗೃಹ ಸಚಿವ ಜಿ ಪರಮೇಶ್ವರ, ಪಂಚಾಯತ್‌ ರಾಜ್‌ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟ್ಯಾಗ್‌ ಮಾಡಿ ಅವರು “ಶಾಂತಿಯುತ ಕರ್ನಾಟಕ” ಎಂಬ ಹೊಸ ಸಹಾಯವಾಣಿಯನ್ನು ಸ್ಥಾಪಿಸಲು ಹಾಗೂ ಕರ್ನಾಟಕದಲ್ಲಿ ಯಾವುದೇ ದ್ವೇಷ ಹರಡದಂತೆ ನಿಗಾ ಇರಿಸಲು. ಸಹಯವಾಣಿ ಅವಶ್ಯಕತೆ ಬಗ್ಗೆ ಬರೆದಿರುವ ಅವರು ನಮ್ಮ ಅಜೆಂಡಾ ಅಭಿವೃದ್ಧಿ ಮತ್ತು ಪ್ರಗತಿ ಮತ್ತು “ಬ್ರಾಂಡ್ ಕರ್ನಾಟಕ” ಅನ್ನು ರಕ್ಷಿಸುವುದು ಮಾತ್ರ ಎಂದಿದ್ದಾರೆ.