ಶಾಸಕರಿಗೆ ಅನುದಾನ ಕೊಡಲು ಸಾಧ್ಯವಿಲ್ಲ

Advertisement

ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಬೇಕಾಗಿರುವ ಹಿನ್ನೆಲೆಯಲ್ಲಿ ಶಾಸಕರಿಗೆ ಅನುದಾನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಾಸಕರು ಭಾರಿ ಆಸೆಯಲ್ಲಿದ್ದಾರೆ. ನಾವು ಕ್ಷೇತ್ರದ ಜನರಿಗೆ ಆ ಭರವಸೆ ಕೊಟ್ಟಿದ್ದೇವೆ, ಈ ಭರವಸೆಗಳನ್ನು ಈಡೇರಿಸಲು ಅನುದಾನಗಳನ್ನು ಕೊಡಿ ಎಂದು ಕೇಳುತ್ತಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಬೇಕಾಗಿರುವ ಹಿನ್ನೆಲೆಯಲ್ಲಿ ಶಾಸಕರಿಗೆ ಅನುದಾನ ಕೊಡಲು ಸಾಧ್ಯವಾಗುತ್ತಿಲ್ಲ. ಎಲ್ಲ ಶಾಸಕರೂ ಕೂಡ ತಡೆದುಕೊಳ್ಳಬೇಕು. ಅನುದಾನಕ್ಕಾಗಿ ಒಂದು ವರ್ಷ ಕಾಯುವುದು ಅನಿವಾರ್ಯ ಎಂದಿದ್ದಾರೆ.