ಶಿಕ್ಷಣ ನೀತಿ ವಿರೋಧಕ್ಕೆ ಸಚಿವ ಜೋಶಿ ಆಕ್ಷೇಪ

ಕೇಂದ್ರ ಸಚಿವ ಜೋಶಿ ಆಕ್ಷೇಪ
Advertisement

ಅಹಮದಾಬಾದ್: ನೂತನ ಶಿಕ್ಷಣ ನೀತಿ ವಿರೋಧಿಸುತ್ತಿರುವ ಕಾಂಗ್ರೆಸ್ ನಡೆಯನ್ನು ಕೇಂದ್ರ ಸಂಸದೀಯ, ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಅವರು ಶನಿವಾರ ಇಲ್ಲಿ ತೀವ್ರವಾಗಿ ಆಕ್ಷೇಪಿಸಿದರು.
ಅಧಿಕಾರಕ್ಕೆ ಬಂದಲ್ಲಿ ನೂತನ ಶಿಕ್ಷಣ ನೀತಿ ರದ್ದು ಪಡಿಸುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಇಡೀ ದೇಶದ ಎಲ್ಲ ಭಾಷೆಗಳು ಹಾಗೂ ಸ್ಥಳೀಯ ಅಸ್ಮಿತೆ ಉಳಿಸಿ, ಅಭಿವೃದ್ಧಿ ಪಡಿಸುವ ನೂತನ ಶಿಕ್ಷಣ ನೀತಿ ಕಾಂಗ್ರೆಸ್‌ಗೆ ಅಪಥ್ಯವಾಗುತ್ತಿದೆ. ಈ ಪಕ್ಷಕ್ಕೆ ದೇಶದ ವಿವಿಧ ಭಾಷೆಗಳು ಹಾಗೂ ವೈವಿಧ್ಯಮಯ ಸಂಸ್ಕೃತಿ ಬೇಕಾಗಿಲ್ಲ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಮೊದಲನೇಯದಾಗಿ ನೀವು ಅಧಿಕಾರಕ್ಕೆ ಬರುವುದಿಲ್ಲ. ನೂತನ ಶಿಕ್ಷಣ ನೀತಿ ರದ್ದು ಮಾಡುವ ಕನಸು ಈಡೇರಿವುದಿಲ್ಲ ಎಂದು ಜೋಶಿ ಲೇವಡಿ ಮಾಡಿದರು.
ಕಾಂಗ್ರೆಸ್‌ಗೆ ಬ್ರಿಟೀಷ್ ಅವಲಂಬಿ ಇಂಗ್ಲಿಷ್ ಗುಲಾಮಿತನವಿದೆ. ಅದು ಇರುವವರೆಗೂ ಆ ಪಕ್ಷ ಇದೇ ರೀತಿ ಮಾತನಾಡುತ್ತದೆ ಮತ್ತು ಇಂತಹ ಬೇಜಾವಾಬ್ದಾರಿ ನಿಲುವುಗಳನ್ನು ತಳೆಯುತ್ತಿರುತ್ತದೆ. ಇಂಗ್ಲಿಷ್ ಭಾಷೆಯೇ ಗೊತ್ತಿಲ್ಲದ ದಕ್ಷಿಣ ಕೋರಿಯಾ ಮತ್ತು ರಷ್ಯಾಗಳಿಂದ ಇಡೀ ವಿಶ್ವ ತಂತ್ರಜ್ಞಾನವನ್ನು ಆಮುದು ಮಾಡಿಕೊಳ್ಳುತ್ತಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಕಾಣುವುದಿಲ್ಲವೇ ಎಂದು ಜೋಶಿ ಪ್ರಶ್ನಿಸಿದರು.