ಸಂಘನಿಕೇತನ ಗಣೇಶೋತ್ಸವ: ಕೈಸ್ತ ಬಾಂಧವರ ಸೌಹಾರ್ದ ಭೇಟಿ

Advertisement

ಮಂಗಳೂರು: ಮಣ್ಣಗುಡ್ಡೆ ಪ್ರತಾಪನಗರದಲ್ಲಿರುವ ಸಂಘನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನಾ ಸಮಿತಿ ಆಶ್ರಯದಲ್ಲಿ ಆಚರಿಸಲ್ಪಡುತ್ತಿರುವ ೭೬ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಶುಕ್ರವಾರ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ನೇತೃತ್ವದಲ್ಲಿ ಕ್ರೈಸ್ತ ಬಾಂಧವರು ಪಾಲ್ಗೊಂಡರು.
ಸೌಹಾರ್ದತೆ ಹಾಗೂ ಸಾಮರಸ್ಯಕ್ಕೆ ವಿಶೇಷ ಆದ್ಯತೆ ನೀಡುವ ಕ್ರೈಸ್ತರ ವೇದಿಕೆ ಪ್ರತಿವರ್ಷವೂ ಇಲ್ಲಿನ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಈ ಬಾರಿಯೂ ಸಂಘನಿಕೇತನಕ್ಕೆ ಭೇಟಿ ನೀಡಿ ವಿಘ್ನವಿನಾಶಕನಿಗೆ ವಿಶೇಷ ಪೂಜೆ ಸಲ್ಲಿಸಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಂಘ ಚಾಲಕ ಡಾ.ಪಿ.ವಾಮನ್ ಶೆಣೈ ಅವರ ನೇತೃತ್ವದಲ್ಲಿ ಕ್ರೈಸ್ತ ಮುಖಂಡರನ್ನು ಬರಮಾಡಿಕೊಳ್ಳಲಾಯಿತು. ಈ ಸಂದರ್ಭ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟಿಲಿನೊ, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೋ, ಲಯನ್ಸ್ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್, ಪ್ರಮುಖರಾದ ಗ್ರೆಗರಿ ಡಿಸಿಲ್ವಾ ಬೊಂದೇಲ್, ರೋಜರ್ ಪಿಂಟೊ ಕಿನ್ನಿಗೋಳಿ, ಅರುಣ್ ರೊಡ್ರಿಗಸ್ ಉರ್ವಾ, ಡೆನ್ನಿಸ್ ಸಲ್ಡಾನಾ ಉರ್ವಾ, ಮ್ಯಾಕ್ಸಿಮ್ ಕ್ರಾಸ್ತ ಅಶೋಕನಗರ, ಲ್ಯಾನಿ ಪಿಂಟೋ, ಸಾಮಾಜಿಕ ಕಾರ್ಯಕರ್ತೆ ಜ್ಯೂಲಿಯೆಟ್ ಡಿಕುನ್ಹಾ ಉರ್ವಸ್ಟೋರ್ ಮತ್ತಿತರರು ಉಪಸ್ಥಿತರಿದ್ದರು. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಅಧ್ಯಕ್ಷ ಫ್ರ್ಯಾಂಕ್ಲಿನ್ ಮೊಂತೇರೊ ಸೌಹಾರ್ಧ ಭೇಟಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.