ಸಂಯುಕ್ತ ಕರ್ನಾಟಕ ಕನ್ನಡಿಗರ ಹೆಮ್ಮೆ: ಸ್ವರ್ಣ ಗುಜ್ಜಾಡಿ ಗೋಪಾಲಕೃಷ್ಣ

ಸಂಯುಕ್ತ ಕರ್ನಾಟಕ ತನ್ನ ಓದುಗರಿಗಾಗಿ ಪ್ರತಿಷ್ಠಿತ ಗುಜ್ಜಾಡಿ ಸ್ವರ್ಣ ಜ್ಯುವೆಲರ್ಸ್ ಸಹಯೋಗದಲ್ಲಿ ಆಯೋಜಿಸಿದ್ದ `ಸ್ವರ್ಣ ಸಂಭ್ರಮ ಲಕ್ಕಿ ಡ್ರಾ' ದಲ್ಲಿ ವಿಜೇತರಾದವರೊಂದಿಗೆ ಗುಜ್ಜಾಡಿ ಸ್ವರ್ಣ ಜ್ಯುವೆಲರ್ಸ್ನ ಪಾಲುದಾರರಾದ ಗುಜ್ಜಾಡಿ ಗೋಪಾಲಕೃಷ್ಣ ನಾಯಕ, ಗಂಗಾವತಿ ಸಿಲ್ಕ್ ಪ್ಯಾಲೇಸ್‌ನ ಮಾಲೀಕ ಆನಂದ ಕಮತಗಿ, ಸಂಯುಕ್ತ ಕರ್ನಾಟಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯನಿರ್ವಾಹಕ ಸಂಪಾದಕ ಮೋಹನ ಹೆಗಡೆ ಇದ್ದರು.
Advertisement

ಹುಬ್ಬಳ್ಳಿ: ನಾಡಿನ ಹೆಮ್ಮೆಯ ಸಂಯುಕ್ತ ಕರ್ನಾಟಕ' ತನ್ನ ಓದುಗರಿಗಾಗಿ ಪ್ರತಿಷ್ಠಿತ ಗುಜ್ಜಾಡಿ ಸ್ವರ್ಣ ಜ್ಯುವೆಲರ್ಸ್ ಸಹಯೋಗದಲ್ಲಿ ಆಯೋಜಿಸಿದ್ದಸ್ವರ್ಣ ಸಂಭ್ರಮ’ ಲಕ್ಕಿ ಡ್ರಾ ಕಾರ್ಯಕ್ರಮ ಶನಿವಾರ ಸಂಯುಕ್ತ ಕರ್ನಾಟಕ ಕಚೇರಿ ಆವರಣದ ಕಬ್ಬೂರ ಸಭಾಗೃಹದಲ್ಲಿ ನಡೆಯಿತು.
ಗುಜ್ಜಾಡಿ ಸ್ವರ್ಣ ಜ್ಯುವೆಲರ್ಸ್ನ ಪಾಲುದಾರರಾದ ಗುಜ್ಜಾಡಿ ಗೋಪಾಲಕೃಷ್ಣ ನಾಯಕ ಹಾಗೂ ಗಂಗಾವತಿ ಸಿಲ್ಕ್ ಪ್ಯಾಲೇಸ್‌ನ ಮಾಲೀಕ ಆನಂದ ಕಮತಗಿ ಲಕ್ಕಿ ಡ್ರಾ ಮೂಲಕ ಅದೃಷ್ಟಶಾಲಿ ವಿಜೇತರ ಹೆಸರು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುಜ್ಜಾಡಿ ಗೋಪಾಲಕೃಷ್ಣ ನಾಯಕ ಅವರು, ನಾಡಿನ ಅತ್ಯಂತ ಹಿರಿಯ ಮತ್ತು ನಿಷ್ಪಕ್ಷಪಾತ ಪತ್ರಿಕೆಯಾದ ಸಂಯುಕ್ತ ಕರ್ನಾಟಕ ನಮ್ಮ ಹುಬ್ಬಳ್ಳಿಯ ಪತ್ರಿಕೆ ಎನ್ನುವುದಕ್ಕೆ ಹೆಮ್ಮೆಯಾಗುತ್ತದೆ. ಜನರಿಗೆ ನಿಷ್ಪಕ್ಷಪಾತವಾಗಿ ಮಾಹಿತಿ ನೀಡಲು ಸಾಧ್ಯವಿದ್ದರೆ ಅದು ಸಂಯುಕ್ತ ಕರ್ನಾಟಕ ಎನ್ನುವುದನ್ನು ತೋರಿಸಿಕೊಟ್ಟಿದೆ ಎಂದರು.
ಸಂಯುಕ್ತ ಕರ್ನಾಟಕ ಲಕ್ಕಿ ಡಿಪ್ ಕಾರ್ಯಕ್ರಮವನ್ನು ಏರ್ಪಡಿಸಿರುವ ಉದ್ದೇಶ ಮಕ್ಕಳಲ್ಲಿ, ಸಾರ್ವಜನಿಕರಲ್ಲಿ ಪತ್ರಿಕೆ ಓದುವ ಅಭಿರುಚಿ ಬೆಳೆಸುವುದೇ ಆಗಿದೆ. ಪತ್ರಿಕೆ ಓದಿನಿಂದ ಭಾಷೆ ಉಳಿಸುವ ಕಾರ್ಯವೂ ನಡೆಯುತ್ತದೆ. ಮೊಬೈಲ್ ಗೀಳಿನಿಂದ ಎಲ್ಲರೂ ಹೊರ ಬರಬೇಕಾಗಿದೆ. ಮಕ್ಕಳಲ್ಲಿ ಕನ್ನಡ ಭಾಷೆ ಅಭಿಮಾನ ಮೂಡಿಸಬೇಕು. ಕನ್ನಡ ಪತ್ರಿಕೆ ಓದುವ ಅಭಿರುಚಿ ಬೆಳೆಸಬೇಕು. ಇದರಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಯುಕ್ತ ಕರ್ನಾಟಕದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಸಂಪಾದಕ ಮೋಹನ ಹೆಗಡೆ ಸ್ವಾಗತಿಸಿ ಸ್ವರ್ಣ ಸಂಭ್ರಮ ಲಕ್ಕಿ ಡಿಪ್ ಡ್ರಾ ಉದ್ದೇಶ ವಿವರಿಸಿದರು.
ಜಾಹೀರಾತು ವಿಭಾಗದ ವ್ಯವಸ್ಥಾಪಕರಾದ ವಿಘ್ನೇಶ್ ಭಟ್, ಪ್ರಸರಣ ವಿಭಾಗದ ಮುಖ್ಯಸ್ಥರಾದ ಶ್ಯಾವiರಾವ ಕುಲಕರ್ಣಿ, ಸುಧೀಂದ್ರ ಹುಲಗೂರ, ಸುರೇಶ ಕಾತೋಟೆ ವೇದಿಕೆಯಲ್ಲಿದ್ದರು.

ಕನ್ನಡ ಪತ್ರಿಕೆ ಓದುವ ತೀರ್ಮಾನ ಮಾಡಿ
ಪತ್ರಿಕೆ ಎಂದರೆ ಬರೀ ಸುದ್ದಿಗೆ ಮಾತ್ರ ಸೀಮಿತವಲ್ಲ. ಭಾಷೆ ಜ್ಞಾನ ಲಭಿಸುತ್ತದೆ. ಈ ಮೂಲಕ ಭಾಷೆ ಉಳಿಸುವ ಕಾರ್ಯ ನಡೆಯುತ್ತದೆ. ನವೆಂಬರ್ ೧ ರಂದು ಕನ್ನಡಿಗರೆಲ್ಲ ಕನ್ನಡ ಪತ್ರಿಕೆಗಳನ್ನು ಓದುವ ತೀರ್ಮಾನ ಮಾಡಬೇಕು. ಇದೇ ನಾವು ಕನ್ನಡ ಮಾತೆಗೆ ಸಲ್ಲಿಸುವ ಗೌರವ ಎಂದು ಗುಜ್ಜಾಡಿ ಗೋಪಾಲಕೃಷ್ಣ ನಾಯಕ ಕರೆ ನೀಡಿದರು.

ಸಾರ್ವಜನಿಕರ ಸಮ್ಮುಖದಲ್ಲೇ ಲಕ್ಕಿ ಡಿಪ್ ಡ್ರಾ
ಸಾರ್ವಜನಿಕರ ಸಮ್ಮುಖದಲ್ಲಿ ಈ ಲಕ್ಕಿ ಡಿಪ್ ಡ್ರಾ ನಡೆಯಿತು. ಸ್ವರ್ಣ ಸಂಭ್ರಮ ಲಕ್ಕಿ ಡಿಪ್‌ನಲ್ಲಿ ವಿಜೇತರಾದ ೨೫ ಅದೃಷ್ಟ ಶಾಲಿಗಳಿಗೆ ಸ್ವರ್ಣ ಜ್ಯುವೆರ‍್ಸ್ ವತಿಯಿಂದ ೨೦೦೦ ರೂ. ಮೌಲ್ಯದ (ಬೆಳ್ಳಿ ಹಾಗೂ ಜೆಮ್ಸ್ ಜ್ಯುವೆಲರಿ) ಗಿಫ್ಟ್ ಓಚರ್ ನೀಡಲಾಯಿತು. ಇದರ ಜೊತೆಗೆ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಭಾಗವಹಿದ್ದ ಸಾರ್ವಜನಿಕರಲ್ಲಿ ೧೦ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿ, ಅವರಿಗೂ ಸಹ ಸ್ವರ್ಣ ಜ್ಯುವೆರ‍್ಸ್ ವತಿಯಿಂದ ೨೦೦೦ ರೂ. ಮೌಲ್ಯದ ಗಿಫ್ಟ್ ಓಚರ್ ನೀಡಲಾಯಿತಲ್ಲದೆ, ಗಂಗಾವತಿ ಸಿಲ್ಕ್ ಪ್ಯಾಲೇಸ್‌ನಿಂದ ಅದೃಷ್ಠಶಾಲಿಗಳಿಗೆ ಸೀರೆ ನೀಡಲಾಯಿತು. ಜುಲೈ ೨೪ ರಿಂದ ಆಗಸ್ಟ್ ೨೨ ರವರೆಗೆ `ಸಂಯುಕ್ತ ಕರ್ನಾಟಕ’ ಸ್ವರ್ಣ ಸಂಭ್ರಮ ಲಕ್ಕಿ ಡಿಪ್ ಇದಾಗಿತ್ತು. ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಲಕ್ಕಿ ಡಿಪ್ ಹಮ್ಮಿಕೊಳ್ಳಲಾಗಿತ್ತು.

ಸೆ. ೬ರಂದು ಕೂಪನ್ ವಿತರಣೆ
ವಿಜೇತ ಅದೃಷ್ಟಶಾಲಿಗಳಿಗೆ ಸೆಪ್ಟೆಂಬರ್ ೬ ರಂದು (ಬುಧವಾರ) ಸಂಯುಕ್ತ ಕರ್ನಾಟಕ ಕಾರ್ಯಾಲಯದಲ್ಲಿ ಮಧ್ಯಾಹ್ನ ೧೧ ರಿಂದ ೨ ಗಂಟೆಯವರೆಗೆ ಸ್ವರ್ಣ ಜ್ಯುವೆಲರ‍್ಸ್ ವತಿಯಿಂದ ೨೦೦೦ ರೂ. ಮೌಲ್ಯದ (ಬೆಳ್ಳಿ ಹಾಗೂ ಜೆಮ್ಸ್ ಜ್ಯುವೆಲರಿ) ಗಿಫ್ಟ್ ವೋಚರ್ ವಿತರಿಸಲಾಗುವುದು. ವಿಜೇತರು ಕಚೇರಿಗೆ ಬಂದು ತಮ್ಮ ಗುರುತಿನ ಪತ್ರವನ್ನು ತೋರಿಸಿ, ಕೂಪನ್‌ಗಳನ್ನು ಸ್ವೀಕರಿಸಬೇಕು.

ಲಕ್ಕಿ ಡ್ರಾ ವಿಜೇತರು:
೧ ಅನಿತಾ ಕ್ಷೀರಸಾಗರ. ಹಳೇಹುಬ್ಬಳ್ಳಿ
೨ ನಂದಾ ವಿಜಯಕುಮಾರ. ಪಾಟೀಲ ಹುಬ್ಬಳ್ಳಿ
೩ ಶಂಕುತಲಾ ಇರಕಲ್. ಹುಬ್ಬಳ್ಳಿ
೪ ಭಾರತಿ ಜಕ್ಕಣ್ಣವರ. ಧಾರವಾಡ
೫ ಹೃತಿಕಾ ಜಿ.ಎ. ನವನಗರ
೬ ಶಂಕುತಲಾ ಕೋಟಿ. ಪಗಡಿ ಓಣಿ
೭ ಮಾಲಾಶ್ರೀ ಬೆಟಗೇರಿ. ಅಮರಗೋಳ
೮ ಶಂಕ್ರಮ್ಮಾ ಮುರಾಳ. ಹೆಗ್ಗೇರಿ ಬಡಾವಣೆ
೯ ಲಕ್ಷ್ಮಿಬಾಯಿ ಶಾಸ್ತ್ರಿ. ಹುಬ್ಬಳ್ಳಿ
೧೦ ಶಬ್ಬೀರಅಹಮ್ಮದ್ ಮಕಾನಂದಾರ. ಹಳೇಹುಬ್ಬಳ್ಳಿ
೧೧ ಪಾರ್ವತಿ ಹಿರೇಮಠ. ಧಾರವಾಡ
೧೨ ಶಶಿಕಲಾ ಗೌರಣ್ಣವರ. ಅದರಗುಂಚಿ
೧೩ ಯು.ಬಿ. ನಾರಜ್ಜಿ. ಧಾರವಾಡ
೧೪ ಶೋಭಾ ಪಾಟೀಲ. ಧಾರವಾಡ
೧೫ ರಕ್ಷಿತಾ ಕೊಡಚವಾಡ. ಅಯೋಧ್ಯಾನಗರ
೧೬ ಸುನೀತಾ ಬ್ಯಾಹಟ್ಟಿ. ಗೋಕುಲ ರೋಡ
೧೭ ನರಸಪ್ಪ ಮುಷ್ಠಿಪಲ್ಲೆ. ಹುಬ್ಬಳ್ಳಿ
೧೮ ಉಷಾ ಕೊಪ್ಪರ. ಸಾರಸ್ವತಪುರ
೧೯ ಸುಜಾತ ಗಣಿ. ಹೆಬಸೂರು
೨೦ ಗಾಯಿತ್ರೀ ನೇಸರಗಿ. ಧಾರವಾಡ
೨೧ ಶಿಲ್ಪಾ ಮಡಿವಾಳರ. ಹೊಸ ಯಲ್ಲಾಪುರ
೨೨ ಸೌಮ್ಯ ಕುಲಕರ್ಣಿ. ಹಳೇಹುಬ್ಬಳ್ಳಿ
೨೩ ಶಿದ್ದಪ್ಪ ನಿಂಗಪ್ಪ ಕಟ್ಟಿಮನಿ. ಯರಿಬೂದಿಹಾಳ
೨೪ ತನುಜಾ ಕರವೀರಶೆಟ್ಟರ್. ಜವಳಿ ಸಾಲ
೨೫ ಜಾಹ್ನವಿ ನಾಗಸಂಪಗಿ. ನೇಕಾರನಗರ