ಸಂವಿಧಾನ ಉಳಿಸಲು ಮೋದಿ ಹತ್ಯೆ ಮಾಡಿ: ವಿವಾದಾತ್ಮಕ ಹೇಳಿಕೆಗೆ ಆಕ್ರೋಶ

Raja Pateria
Advertisement

ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ ಮಧ್ಯಪ್ರದೇಶದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಆಗಿರುವ ರಾಜಾ ಪಟೇರಿಯಾ , ಸರಳ ಸಭೆಯೊಂದರಲ್ಲಿ ಪಟೇರಿಯಾ ಮಾತನಾಡಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಸಭೆಯಲ್ಲಿ ಮಾತನಾಡುತ್ತಾ, `ಪ್ರಧಾನಿ ಮೋದಿ ಅವರು ಧರ್ಮದ ಆಧಾರದ ಮೇಲೆ ಜನರನ್ನ ವಿಭಜಿಸುತ್ತಿದ್ದಾರೆ. ಮೋದಿ ಅವರ ಆಡಳಿತದಲ್ಲಿ ದಲಿತರು ದೊಡ್ಡ ಬೆದರಿಕೆ ಎದುರಿಸುತ್ತಿದ್ದಾರೆ. ನೀವು ಸಂವಿಧಾನ ಉಳಿಸಲು ಮೋದಿಯನ್ನು ಕೊಲ್ಲಲು ಸಿದ್ಧರಾಗಬೇಕು. ಕೊಲ್ಲುವುದೆಂದರೆ ಹತ್ಯೆ ಮಾಡುವುದಲ್ಲ. ಅವರನ್ನು ಸೋಲಿಸಬೇಕು’ ಎಂದು ಹೇಳಿಕೆ ನೀಡಿದ್ದಾರೆ.
ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಮಾಜಿ ಸಚಿವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ನಂತರ ಇದಕ್ಕೆ ಸ್ಪಷ್ಟನೆ ನೀಡಿರುವ ಪಟೇರಿಯಾ, ನನ್ನ ಅಭಿಪ್ರಾಯವನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಗಾಂಧಿಯನ್ನು ನಂಬುವ ವ್ಯಕ್ತಿ, ಈ ರೀತಿ ಮಾತನಾಡಲಾರೆ. ಸಂವಿಧಾನ ಉಳಿಸಲು ಮೋದಿ ಅವರನ್ನು ಸೋಲಿಸಬೇಕು ಅನ್ನೋ ಅರ್ಥದಲ್ಲಿ ಮಾತನಾಡಿದ್ದೇನೆ. ದಲಿತರು, ಆದಿವಾಸಿಗಳನ್ನು ರಕ್ಷಿಸಲು ಹಾಗೂ ನಿರುದ್ಯೋಗ ಸಮಸ್ಯೆಯನ್ನು ತೊಡೆದುಹಾಕಲು ಮೋದಿಯನ್ನು ಸೋಲಿಸುವುದು ಅವಶ್ಯಕ ಎಂಬ ಅರ್ಥದಲ್ಲಿ ಹೇಳಿದ್ದೇನೆ. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.