ಸತ್ತವರ ಮೇಲೆ ದ್ವೇಷ ಬೇಡ

Advertisement

ಕೆಲವರು ಸತ್ತ ಮೇಲೂ ಕೂಡ ದ್ವೇಷ ಸಾಧಿಸುತ್ತಾರೆ. ಇದು ತಪ್ಪು. ಅವನು ಎಷ್ಟೇ ದುಷ್ಟ್ಟನಾಗಿದ್ದರೂ ಸತ್ತ ಮೇಲೆ ವೈರತ್ವವನ್ನು ಸಾಧಿಸಬಾರದು.
ಹೀಗೆಂದು ಶ್ರೀರಾಮಚಂದ್ರನು ವಿಭೀಷಣನನ್ನು ಕುರಿತು ಹೇಳುತ್ತಾನೆ. ಕೇವಲ ಮರಣದ ತನಕ ವೈರಿ. ಈಗ ರಾವಣನು ನಿನ್ನ ಅಣ್ಣ. ಈತನ ಉತ್ತರ ಕ್ರಿಯೆಯನ್ನು ಮಾಡು. ನಿನಗಷ್ಟೇ ಅಲ್ಲ. ನನಗೂ ಕೂಡ ಅವನು ಸಹೋದರನೇ ಆಗಿರುವನು.
ದುಃಖದಿಂದ ಕುಗ್ಗಬೇಡ ಸುಖಕ್ಕೆ ಹಿಗ್ಗಬೇಡ, ಆಪತ್ತು ಎದುರಾದಾಗ ಸಂಕಟಗಳಿಗೆ ಈಡಾದಾಗ ಎಲ್ಲರೂ ದುಃಖಿಗಳಾಗುತ್ತಾರೆ. ದುಃಖಕ್ಕೆ ತಮ್ಮನ್ನು ಒಪ್ಪಿಸಿಕೊಳ್ಳುತ್ತಾರೆ. ಹಾಗೆಯೇ ಅಂದುಕೊಂಡದ್ದು ನೆರವೇರಿದಾಗ ಅತ್ಯಂತ ಸುಖಿಯಾಗುತ್ತಾನೆ. ಸುಖಕ್ಕೆ ತನ್ನನ್ನು ಒಪ್ಪಿಸಿಕೊಳ್ಳುತ್ತಾರೆ. ಇವೆರಡೂ ಕೂಡ ತಪ್ಪು. ಶತ್ರುಗಳಿಗೆ ತನ್ನನ್ನು ಒಪ್ಪಿಸಿಕೊಂಡಂತೆ ದುಃಖಕ್ಕೆ ಮತ್ತು ಸುಖಕ್ಕೆ ತನ್ನನ್ನು ಒಪ್ಪಿಸಿಕೊಳ್ಳಬಾರದು. ದುಃಖ ಬಂದಾಗ ತನಗಿಂತ ಹೆಚ್ಚು ದುಃಖಗಳನ್ನು ಕಾಣಬೇಕು. ಸುಖ ಬಂದಾಗ ತನಗಿಂತ ಹೆಚ್ಚು ಸುಖಿಗಳನ್ನು ನೋಡಬೇಕು.
ದುಷ್ಟರು ಮಾಡಿದ್ದನ್ನು ಶಿಷ್ಟರು ಅನುಭವಿಸಬೇಕು ದುಷ್ಟ್ಟನು ಕೆಟ್ಟದ್ದನ್ನು ಮಾಡುತ್ತಾನೆ. ಕೆಟ್ಟದಾರಿಯಲ್ಲಿ ನಡೆಯುತ್ತಾನೆ. ಅದರ ಪರಿಣಾಮವನ್ನು ಸಜ್ಜನ ಅನುಭವಿಸ ಬೇಕಾಗುತ್ತದೆ. ಸೀತೆಯನ್ನು ಅಪಹಾರ ಮಾಡಿದ್ದು ರಾವಣ. ಆದರೆ, ಬಂಧನವಾಗಿದ್ದು ಸಮುದ್ರಕ್ಕೆ ಇದುವೇ ಲೋಕನಿಯಮವಾಗಿ ಬಿಟ್ಟಿದೆ. ಆದ್ದರಿಂದ ದುರ್ಜನ ಸಂಘವನ್ನು ಮಾಡಬಾರದು. ಅದು ಕೇವಲ ಆರಂಭದಲ್ಲಷ್ಟೇ ಮಧುರ. ಇದರಿಂದ ಅನುಭವಿಸಬೇಕಾದ ಕಷ್ಟ್ಟ ಜೀವನ ಪರ್ಯಂತ ಉಳಿಯುತ್ತದೆ. ಇದನ್ನು ತಿಳಿದು ನಡೆದರೆ ಸುಖವಿದೆ ಎಂದು ಶ್ರೀರಾಮಚಂದ್ರ ವಿಭೀಷಣನಿಗೆ ಮಾಡಿದ ಉಪದೇಶ ಇಂದಿಗೂ ಪ್ರಸ್ತುತವಾಗಿದೆ.