ಸದಾಕಾಲ ಭಗವಂತನ ಸ್ಮರಣೆಯಿಂದ ಪುಣ್ಯಪ್ರಾಪ್ತಿ

PRATHAPPHOTOS.COM
Advertisement

ಭಗವಂತ ಎಂದರೆ ನಾಲ್ಕು ದಿನದ ಸಂಸಾರ ಅಲ್ಲ; ತಾತ್ಕಾಲಿಕ ಸುಖವಲ್ಲ. ನಾನಾ ರೋಗ ರುಜಿನಗಳು ಕಷ್ಟ, ದುಃಖ ದುಮ್ಮಾನಗಳಿಲ್ಲದ ಅನಂತ ಕಾಲದ ಸುಖವನ್ನು ಕೊಡುತ್ತಾನೆ.
ನಾರಾಯಣನ ಮಹಿಮೆ ಅಪಾರವಾದದ್ದು, ಕೃಷ್ಣನ ಮಹಿಮೆ ಏನೆಂದು ಕೇಳಿದರೆ ಕೇವಲ ತಮ್ಮ ಇಚ್ಛೆಯಿಂದ ಮನುಷ್ಯನಾಗಿ ಕೇವಲ ಲೋಕೊದ್ಧಾರಕ್ಕಾಗಿಯೇ ಅವತಾರ ಮಾಡಿದ್ದಾರೆ.
ಸಾಮಾನ್ಯ ಜನರಂತೆ ಭಗವಂತನದ್ದು ಜನನವಲ್ಲ, ಅವನು ಜನಾರ್ಧನ, ಜನಾ `ಅರ್ದನ’, ಅವನೇ ಮಾಯಾಪುರುಷ ನಾರಾಯಣನೇ ಅವನೇ ಪುರುಷ, ಅವನೇ ಕಾಲ, ಅವನು ಕಾಲ ಕೃಷ್ಣನೂ ಹೌದು, ಇಡೀ ಜಗತ್ತನ್ನು ನಿಯಮನ ಮಾಡುವ ಕಾಲನೂ ಹೌದು.
ಹೀಗಾಗಿ ಆತನ ಕತೆಯನ್ನು ಆಲಿಸುತ್ತಿದ್ದರೆ ಸುಖದ ಜೀವನ ನಮ್ಮದಾಗುತ್ತದೆ.
ಸತ್ಯಧರ್ಮತೀರ್ಥರು ಕೆಲವೊಮ್ಮೆ ಉತ್ಸಾಹದಿಂದ ಪ್ರಶ್ನೆ ಕೇಳಿ ಬಿಡುತ್ತಾನೆ ಮನುಷ್ಯ, ಅಷ್ಟೇ ಉತ್ಸಾಹದಿಂದ ಉತ್ತರ ಕೊಡುತ್ತಾ ಹೋದರೆ ಕೇಳುಗ ಎಚ್ಚರದಿಂದ ಕೇಳಲಿ ಬಿಡಲಿ ಪ್ರವಚನ ಮಾತ್ರ ದೂರದರ್ಶದಲ್ಲಿ ಕೇಳುವವರಿದ್ದಾರೆ ಎಂಬ ನಂಬಿಕೆಯಲ್ಲಿ ಅವ್ಯಾಹತವಾಗಿ ಸಾಗುತ್ತಲೆಯಿರುತ್ತದೆ.
ಆದರೆ ಸಮಸ್ಯೆ ಕೇಳುವವರಿಗೆ ಬರುತ್ತದೆ. ದೇವರ ಮಹಿಮೆಯ ಉಪನ್ಯಾಸವನ್ನು ಎಚ್ಚರದಿಂದ ಕೇಳದೆ ಇದ್ದವರಿಗೆ ಹಾನಿಯಾಗುತ್ತದೆ.
ಪ್ರವಚನ ಮಾಡುವವರ ಉತ್ಸಾಹಕ್ಕಿಂತ ಭಗವಂತನ ಲೀಲೆಗಳನ್ನು ಕೇಳುವವರು ಎಚ್ಚರದಿಂದ ಕೇಳದೆ ಇದ್ದರೆ ಭಗವಂತನ ಮಹಿಮೆಗಳಿಂದ ವಂಚಿತರಾಗುತ್ತಾರೆ. ಇತಿಹಾಸ ಪುರಾಣಗಳನ್ನು ಉಪನಿಷತ್ತುಗಳನ್ನು ತೆಗೆದು ನೋಡಿದರೆ ಯಾವುದೂ ಹೊಸ ವಿಷಯ ಹೇಳದೆ ಕೇಳದೆ ಎದುರಿಗೆ ಮಹತ್ವ ಇದೆ ಎಂದು ತಿಳಿಯಬಾರದು. ದೇವರ ಒಂದೊಂದು ಲೀಲೆಗಳನ್ನು ಒಂದೊಂದು ಕಥೆಗಳನ್ನು ದೇವರು ಕುಳಿತ ನಿಂತ ಎದ್ದ ಹೋದ, ಹೊರಳಿದ, ಒಂದೊಂದು ಮಹಿಮೆ ಕಥೆಗಳನ್ನು ಒಂದೊಂದೇ ಲೀಲೆಗಳನ್ನು ಕೇಳುವುದು ಕೂಡ ಆತನ ಚಿಂತನೆ ಮಾಡಿದಂತೆ.
ಹೀಗಿರುವಾಗ ನನ್ನ ಗಮನ ಆಸೆ ಈಚೆ ಹೋಗದಂತೆ ಚೆನ್ನಾಗಿ ಗಮನವಿಟ್ಟು ಭಗವಂತನ ಲೀಲೆಗಳನ್ನು ಕೇಳು ಮಗು ಎಂದು ಹಾಗಾದರೆ ನಮ್ಮನ್ನು ಎಚ್ಚರಿಸಿ ನಮಗೆ ಉಪದೇಶ ಮಾಡಿ ಎಂದು ಹೇಳುವುದಕ್ಕೆ ಉಪಮಂತ್ರಣ ಎಂದು ಹೇಳುತ್ತಾರೆ. ಆ ರೀತಿ ಹೇಳುವಾಗ ಅಪ್ಪಣೆ ಪದ ಬರುತ್ತದೆ. ಪ್ರಾಯಶಃ ಅನ್ನಾಹಾರ, ನೀರು ಬಿಟ್ಟು ಇದಕ್ಕಾಗಿ ಸರ್ವಸಂಗ ಪರಿತ್ಯಾಗ ಮಾಡಿಕೊಂಡ ಪರೀಕ್ಷಿತ ಮಹಾರಾಜರಿಗೆ ಇದರ ಸಮಸ್ಯೆ ಇರದಿದ್ದರೂ ಅವರ. ಅವರ ಜೊತೆಗೆ ದೊಡ್ಡ ಸಭೆ ಇತ್ತು. ಅದರಲ್ಲಿ ಬೇಕಾದಷ್ಟು ಸಾಮಾನ್ಯ ಜನರಿದ್ದರು ಅಂಥವರನ್ನು ಎಬ್ಬಿಸುವುದುಕ್ಕೋಸ್ಕರ ಭೂಮಂತ್ರಣ ಪೂರ್ವಕವಾಗಿ ನಮಗೆ ಹೇಳಿ ಎಂದು ಹೇಳುವುದಕ್ಕಾಗಿ ಪರೀಕ್ಷಿತ ಮಹಾರಾಜ ಈ ಪ್ರಯೋಗವನ್ನು ಮಾಡಿದ್ದಾರೆ ಎಂದು ಸತ್ಯಧರ್ಮತೀರ್ಥ ಶ್ರೀಪಾದಂಗಳವರು ಹೇಳಿದ್ದಾರೆ.