ಸರ್ಕಾರವನ್ನು ನಾವು ಅಭದ್ರಗೊಳಿಸುತ್ತಿಲ್ಲ

ಜೋಶಿ
Advertisement

ಹುಬ್ಬಳ್ಳಿ: ಸರ್ಕಾರವನ್ನು ನಾವು ಅಭದ್ರಗೊಳಿಸುತ್ತಿಲ್ಲ‌ ಅವರ ಶಾಸಕರೇ ಆ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ‌ ಅವರು ಸಚಿವ ಸಂತೋಷ ಲಾಡ. ಹೇಳಿಕೆಗೆ ತಿರುಗೇಟು ನೀಡಿದರು.
ನಗರದಲಗಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಉಪಮುಖ್ಯಮಂತ್ರಿ ನಡುವೆ ಜಗಳ‌ ನಡೆಯುತ್ತಿದೆ. ಹೀಗಾಗಿ ಬೇರೆಯವರು ಅಭದ್ರಗೊಳಿಸು‌ವ ಮಾತು‌ ಬರುವುದಿಲ್ಲ. ಅವರೇ ಅಭದ್ರಗೊಳಿಸಿಕೊಳ್ಳುತ್ತಿದ್ದಾರೆ. ಅವರೇ ಬಡಿದಾಡಿಕೊಂಡು ಬಿಜೆಪಿಯವರ ಮೇಲೆ ಹಾಕುತ್ತಿದ್ದಾರೆ.
ಲಾಡ್ ಅವರಿಗೆ ಪ್ರಧಾನಿ ನರೇಂದ್ರ‌ ಮೋದಿ ಹಾಗೂ ಜೋಶಿ ಅವರನ್ನು ಬೈಯ್ಯಲು ಹೇಳಿದ್ದಾರೆ. ಹಿಂದುತ್ವ ಸೇರಿದಂತೆ ಜಾತೀಯತೆ ಬಗ್ಗೆ ಕಾಂಗ್ರೆಸ್ಸಿನವರಿಗೆ ಒಳ್ಳೆಯ ಅಭಿಪ್ರಾಯ ಇಲ್ಲ.
ನಮಗೆ ದೇಶ ಅಭಿವೃದ್ಧಿ ಆಗಬೇಕು, ಮುಂದುವರೆಯಬೇಕೆಂಬ ಅಭಿಮಾನವಿದೆ. ಆದರೆ, ಕಾಂಗ್ರೆಸ್ಸಿನಲ್ಲಿ ಈ‌ ಮನಸ್ಥಿತಿ ಇಲ್ಲ. ಅವರ ನೀತಿಗಳೇ ವಿಚಿತ್ರವಾಗಿವೆ. ಈಗಾಹಲೇ ಇದಕ್ಕೆ ಜನತೆ ಉತ್ತರ ಕೊಟ್ಟಿದ್ದಾರೆ. ಮುಂದೆಯೂ ಕೊಡುತ್ತಾರೆ ಎಂದರು.
ರಾಜ್ಯಕ್ಕೆ ಅನ್ಯಾಯದ ಕುರಿತು ಮಾತನಾಡಿದ ಜೋಶಿ, ಮೊದಲು ರಾಜ್ಯಕ್ಕೆ ೬೦ ಸಾವಿರ ಕೋಟಿ ಬರುತ್ತಿತ್ತು. ಈಗ ೨.೬೦ ಲಕ್ಷ ಕೋಟಿ ಬರುತ್ತಿದೆ. ತೆರಿಗೆ ಯುಪಿಎ ಕಾಲದಲ್ಲಿ ೮೧ ಸಾವಿರ ಕೋಟಿ ಬರುತ್ತಿತ್ತು. ಈಗ ೨.೫೧ ಲಕ್ಷ ಕೋಟಿ‌ಬರುತ್ತಿದೆ. ಯಾವುದು ಅನ್ಯಾಯ ಎಂಬುದನ್ನ ಕಾಂಗ್ರೆಸ್ ಹೇಳಲಿ. ಹೆಚ್ಚು ರಸ್ತೆ, ರೈಲ್ವೆ, ರೈತರಿಗೆ ಯೋಜನೆಗಳನ್ನು ನಾವು ಕೊಟ್ಟಿದ್ದೇವೆ. ಇಂತಹ ಹಲವು ಉದಾಹರಣೆಗಳನ್ನು ನಾನು ನೀಡುವೆ ಎಂದರು.
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಇವರ ಶಾಸಕರೇ ೫೦ ಪ್ರಸೆಂಟ್ ಕಮೀಷನ್ ಎಂದು ಹೇಳುತ್ತಿದ್ದಾರೆ. ಕೇಂದ್ರದ ಅನುದಾನವನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ಇವರು ಕೆಲಸ ಮಾಡಿದರೆ ಕೇಂದ್ರದಿಂದ ಅನುದಾನ ನೀಡಲು ಸಿದ್ಧವಿದೆ ಎಂದರು.
ಡಿ.ಕೆ. ಸುರೇಶ ಹೇಳಿಕೆ ಕುರಿತು ಹಕ್ಕುಚ್ಯುತಿ ಮಂಡನೆ ಕುರಿತು‌ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.