ಸರ್ಕಾರಿ ಗುಂಡುತೋಪು ಒತ್ತುವರಿ ಸರ್ವೆ

Advertisement

ಬಂಗಾರಪೇಟೆ: ಶಾಸಕ ಎಸ್.ಎಸ್‌. ನಾರಾಯಣಸ್ವಾಮಿ ಸರ್ಕಾರಿ ಗುಂಡುತೋಪು ಒತ್ತುವರಿ ಮಾಡಿಕೊಡಿರುವ ಆರೋಪ ಹಿನ್ನೆಲೆ ಇಂದು ಬಂಗಾರಪೇಟೆ ತಹಶೀಲ್ದಾರ್‌ ದಯಾನಂದ್ ನೇತೃತ್ವದಲ್ಲಿ ಸರ್ವೆ ನಡೆಯಿತು.
ಬಂಗಾರಪೇಟೆ ತಾಲ್ಲೂಕಿನ ಅನಿಗಾನಹಳ್ಳಿ ಗ್ರಾಮದ ಸರ್ವೆ ನಂ. 36 ರಲ್ಲಿ 0.35 ಗುಂಟೆ ಸರ್ಕಾರಿ ಗುಂಡುತೋಪು ಒತ್ತುವರಿ ಮಾಡಿಕೊಂಡಿದ್ದು ತೆರವುಗೊಳಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದು, ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಮಾರ್ಚ್ 2022 ರಂದು ಭೂ ಕಬಳಿಗೆ ನ್ಯಾಯಾಲಯದಲ್ಲಿ ರೈತ ಸಂಘದ ಹೋರಾಟಗಾರ್ತಿ ನಳಿನಿ ಗೌಡ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಉಪವಿಭಾಗಾಧಿಕಾರಿಗಳಿಗೆ ನ್ಯಾಯಾಲಯ ಆದೇಶಿದ್ದು, ಅದರಂತೆ ಇಂದು ತಹಶೀಲ್ದಾರ್ ನೇತೃತ್ವದಲ್ಲಿ ಸರ್ವೆ ನಡೆಯಿತು.
ಈ ಮಧ್ಯೆ ಇಂದು ಅನಿಗಾನಹಳ್ಳಿ ಗ್ರಾಮದ ಸರ್ವೆ 36 ರ ಗುಂಡುತೋಪು ಸರ್ವೆ ನಡೆಸಲು ತಾಲ್ಲೂಕು ಸರ್ವೆಯರ್ ಹರೀಶ್ ಅವರನ್ನ ನೇಮಿಸಲಾಗಿತ್ತು‌. ಆದರೆ, ಅವರು ಸರ್ವೆ ಕಾರ್ಯಕ್ಕೆ ಬಾರದೆ ಮೊಬೈಲ್ ಸ್ಪಿಚ್ಡ್‌ ಆಫ್‌ ಮಾಡಿಕೊಂಡು ಅಳತೆ ಕಾರ್ಯಕ್ಕೆ ಹಾಜರಾಗದೇ ಕರ್ತವ್ಯ ಲೋಪ ಎಸಗಿದ್ದು, ಅವರ ವಿರುದ್ದ ಇಲಾಖೆ ವಿಚಾರಣೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ತಹಶೀಲ್ದಾರ್ ತಿಳಿಸಿದರು.
ಇನ್ನು ಸರ್ವೆ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ನಾನು ಯಾವುದೇ ಸರ್ಕಾರಿ ಜಮೀನು ಒತ್ತುವರಿ ಮಾಡಿಲ್ಲ. ತಹಶಿಲ್ದಾರ್ ದಯಾನಂದ್ ಅವರು ಜೆಡಿಎಸ್ ಪಕ್ಷದ ಏಜೆಂಟನಂತೆ ಕೆಲಸ ಮಾಡುತ್ತಿದ್ದಾರೆ. ಸಿಎಂ ಅವರ ವಿಶೇಷ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅಣತಿಯಂತೆ ಕೆಲಸ ಮಾಡ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಂಸದ ಮುನಿಸ್ವಾಮಿ ಜೊತೆಗೂಡಿ ಭೂ ಹಗರಣ ಎಂಬ ಆರೋಪ ಹೊರಿಸಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು.