ಸಲಿಂಗ ವಿವಾಹಕ್ಕೆ ಪೇಜಾವರ ಶ್ರೀಗಳ ವಿರೋಧ

ಪೇಜಾವರ ಶ್ರೀ
Advertisement

ಬಾಗಲಕೋಟೆ: ಸಲಿಂಗ ಕಾಮಿಗಳಿಗೆ ವೈವಾಹಿಕ ಸಂಬಂಧಕ್ಕೆ ಸುಪ್ರಿಂ ಕೋರ್ಟ್‌ ಅನುಮತಿ ನೀಡಿದರೆ ಅದು ತಪ್ಪು ಸಂದೇಶ ಹೋಗುತ್ತದೆ ಎಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು.
ಶ್ರೀ ಕೃಷ್ಣ ಮಠದ ವಿದ್ಯಾರ್ಥಿ ವಸತಿ ನಿಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದು ಸಮಾಜದ ವೈವಾಹಿಕ ಪವಿತ್ರ ಸಂಬಂಧಕ್ಕೆ ಧಕ್ಕೆ ತರುತ್ತದೆ ಅವರು ಹೇಳಿ ಸುಪ್ರಿಂ ಕೋರ್ಟನಲ್ಲಿ ನಡೆದಿರುವ ವಿಚಾರಣೆ ಊರ್ಜಿತಗೊಳಿಸುವ ಸಾಧ್ಯತೆಗಳು ಕಾಣುತ್ತಿವೆ ಎಂದು ಹೇಳಿದರು.
ಸುಪ್ರಿಂ ಕೋರ್ಟ ನೇರವಾಗಿ ಅನುಮತಿ ನೀಡುವ ಬದಲು ಹಿಂದೂ ಧರ್ಮದ ವಿದ್ವಾಂಸರು, ಧರ್ಮ ಪಂಡಿತರ ಒಟ್ಟು ಅಭಿಪ್ರಾಯವನ್ನು ಕೇಳಬೇಕು ಎಂದು ಹೇಳಿದ ಅವರು ಸಲಿಂಗ ಕಾಮಿಗಳಿಗೆ ವೈವಾಹಿಕ ಸಂಬಂಧಕ್ಕೆ ಅನುಮತಿ ನೀಡಿ ಎಲ್ಲ ಸೌಲಭ್ಯ ಒದಗಿಸಬೇಕೆಂಬ ಸಲಹೆ ಪ್ರಸ್ತಾಪ ಕೂಡ ಅತ್ಯಂತ ಮಾರಕ ಎಂದರು.
ಒಂದು ವೇಳೆ ಸುಪ್ರಿಂ ಕೋರ್ಟ್ ಅನುಮತಿ ನೀಡಿದರೇ ಅದನ್ನು ಗೌರವಿಸಬೇಕಾಗುತ್ತದೆ ಆದರೆ ಸುಪ್ರಿಂ ಕೋರ್ಟ್‌ ಕೂಡ ರಾಜಪ್ರಭುತ್ವದ ಇನ್ನೊಂದು ಮುಖವಾಗಬಾರದೆಂದು ಅವರು ಹೇಳಿದರು.