ಸಹಜ ಸ್ಥಿತಿಯತ್ತ ಬೆಂಗಳೂರು

Advertisement

ಬೆಂಗಳೂರು: ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಕರೆ ನೀಡಿರುವ ಬೆಂಗಳೂರು ನಗರ ಬಂದ್‌ ಮಧ್ಯಾಹ್ನದ ವೇಳೆಗೆಲ್ಲಾ ಬಂದ್ ವಾಪಸ್ ಪಡೆದಿದೆ. ಹಲವು ಬೇಡಿಕೆಗಳನ್ನ ಆಗ್ರಹಿಸಿ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದ ಖಾಸಗಿ ಸಾರಿಗೆ ಒಕ್ಕೂಟ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ, ಬೇಡಿಕೆಗಳನ್ನ ಈಡೇರಿಸುವ ಭರವಸೆ ನೀಡಿದ್ದಾರೆ. ಇದರಿಂದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿರುವುದಾಗಿ ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ತಿಳಿಸಿದ್ದಾರೆ. ನಿಮ್ಮ ಬೇಡಿಕೆಗಳಲ್ಲಿ ಶಕ್ತಿ ಯೋಜನೆ ಹಾಗೂ ತೆರಿಗೆ ಎರಡು ಬೇಡಿಕೆ ನಮ್ಮ ಸರ್ಕಾರದಿಂದ ಆಗಿರುವ ಸಮಸ್ಯೆ. ಉಳಿದೆಲ್ಲಾ ಬೇಡಿಕೆಗಳು ಎಲ್ಲಾ ಹಿಂದಿನ ಸರ್ಕಾರದಲ್ಲಿ ಆಗಿರುವುದು. ಆದಾಗ್ಯೂ ಈ ಬೇಡಿಕೆಗಳನ್ನ ಈಡೇರಿಸುವುದಾಗಿ ಹೇಳಿದ್ದೇನೆ, ಈಡೇರಿಸುತ್ತೆನೆ ಎಂದು ಭರವಸೆ ನೀಡಿದ್ದಾರೆ. ಟ್ಯಾಕ್ಸಿ ಮಾಲೀಕರ ಸಂಘದ ಬೇಡಿಕೆಗಳನ್ನೂ ಮುಖ್ಯಮಂತ್ರಿಗಳ ಮುಂದಿಟ್ಟು ಪರಿಹಾರ ಒದಗಿಸುವ ಕೆಲಸ ಮಾಡ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ.