ಸಿಇಟಿ ಪರೀಕ್ಷೆ ಆಯ್ಕೆಗೆ ಅವಕಾಶ

Advertisement

ಬೆಂಗಳೂರು: ಸಿಇಟಿ ಆಯ್ಕೆ ಮಾಡಿಕೊಂಡಿಲ್ಲ ಎನ್ನುವವರಿಗೆ ಸುವರ್ಣ ಅವಕಾಶವನ್ನು ಕಲ್ಪಿಸಿದೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ಹೊರಡಿಸಿದ್ದು ಯುಜಿಸಿಇಟಿ 2024ಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿ ವಿಫಲವಾಗಿರುವ ಹಾಗೂ ಅರ್ಜಿಯಲ್ಲಿ ಸಿಇಟಿ ಪರೀಕ್ಷೆಯನ್ನು ಆಯ್ಕೆ ಮಾಡದಿರುವಂತಹ ಅಭ್ಯರ್ಥಿಗಳ ಬಗ್ಗೆ ಯುಜಿಸಿಇಟಿ 2024ರ ಪರೀಕ್ಷೆಗಳು ಇದೇ ತಿಂಗಳ ದಿನಾಂಕ. 18 ಮತ್ತು 19 ರಂದು ನಡೆಯಲಿವೆ. ಪ್ರವೇಶ ಪತ್ರಗಳನ್ನು ಸಹ ಬಿಡುಗಡೆ ಮಾಡಲಾಗಿದೆ. ಈ ಹಂತದಲ್ಲಿ ಕೆಲವು ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವಾಗ ಸಿಇಟಿ ಪರೀಕ್ಷೆ ಆಯ್ಕೆ ಮಾಡಿಲ್ಲವೆಂದು ಹಾಗೂ ಇನ್ನೂ ಕೆಲವು ಅಭ್ಯರ್ಥಿಗಳು ಶುಲ್ಕ ಪಾವತಿ ವಿಫಲವಾಗಿರುವ ಕಾರಣ ಪ್ರವೇಶ ಪತ್ರ ಡೌನ್‌ಲೋಡ್ ಆಗುತ್ತಿಲ್ಲವೆಂದು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿರುತ್ತಾರೆ. ಪರೀಕ್ಷೆಗಳು ಇನ್ನೂ ಕೇವಲ ಐದಾರು ದಿನಗಳು ಮಾತ್ರ ಬಾಕಿ ಇರುವ ಕಾರಣ ಹಾಗೂ ಮಾನವೀಯತೆ ದೃಷ್ಠಿಯಿಂದ ಈ ಕೆಳಕಂಡ ಷರತ್ತುಗಳಿಗೆ ಒಳಪಡಿಸಿ ಮೇಲಿನ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ.

  1. ಅರ್ಜಿಯಲ್ಲಿ ಸಿಇಟಿ ಪರೀಕ್ಷೆ ಆಯ್ಕೆ ಮಾಡದ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಖುದ್ದು ಹಾಜರಾಗಿ ದಿನಾಂಕ. 10.04.2024 ರಿಂದ 12.04.2024 ಸಂಜೆ 5.00 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು.
  2. ಶುಲ್ಕ ಪಾವತಿ ವಿಫಲರಾಗಿರುವಂತಹ ಅಭ್ಯರ್ಥಿಗಳು ತಾವು ಸಲ್ಲಿಸಿರುವ ಅರ್ಜಿ ನಮೂನೆಯೊಂದಿಗೆ, Executive Director, Karnataka Examinations Authority, Bangalore ರವರ ಹೆಸರಿನಲ್ಲಿ ರೂ.600/- ಮೊತ್ತದ ಡಿಡಿಯೊಂದಿಗೆ ದಿನಾಂಕ. 10.04.2024 ರಿಂದ 12.04.2024 ಸಂಜೆ 5.00 ಗಂಟೆಯೊಳಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಖುದ್ದು ಹಾಜರಾಗಿ ಮನವಿ ಸಲ್ಲಿಸಬೇಕು.
    ಖಾಲಿ
  3. ಪರೀಕ್ಷೆಯ ಎಲ್ಲಾ ತಯಾರಿಗಳು ಮುಗಿದಿರುವ ಕಾರಣ ಮೇಲಿನ ಅಭ್ಯರ್ಥಿಗಳನ್ನು ರಾಜ್ಯದ ಯಾವುದೇ ಭಾಗದ ಇರುವ ಪರೀಕ್ಷಾ ಕೇಂದ್ರಕ್ಕೆ ಹಂಚಿಕೆ ಮಾಡಲಾಗುವುದು. ಸದರಿ ಅಭ್ಯರ್ಥಿಗಳು ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಸಿದ್ಧರಾಗಿರಬೇಕು. ಅಂತಹ ಅಭ್ಯರ್ಥಿಗಳ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು.
  4. ಪರೀಕ್ಷೆಯ ಆನ್‌ಲೈನ್ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಕೆ ಪೂರ್ಣಗೊಂಡಿರುವ ಕಾರಣ ಈ ಹಂತದಲ್ಲಿ ಹೆಚ್ಚುವರಿ ಅಭ್ಯರ್ಥಿಗಳನ್ನು ಸೇರಿಸುತ್ತಿರುವ ಕಾರಣ ದತ್ತಾಂಶದಲ್ಲಿ ಸದರಿ ಅಭ್ಯರ್ಥಿಗಳಿಗೆ ವ್ಯತ್ಯಾಸವಾದಲ್ಲಿ ಪ್ರಾಧಿಕಾರ ಜವಾಬ್ದಾರಿ ಆಗುವುದಿಲ್ಲ ಎಂದು ತಿಳಿಸಿದೆ.