ಸಿಟ್ಟಿನಿಂದ ಹೊಡೆದಳಾ ತಮಾಷೆಗೆ ಹೊಡೆದಳಾ?

Advertisement

ಕಂಗನಾ ಕಪಾಳಕೆ ಛಟೀರ್ ಎಂದು ಹೊಡೆತ ತಿಂದು ಅಳುತ್ತ ಸೀದಾ ಬಂದಿದ್ದು ಸೋದಿಮಾಮಾನ ಹತ್ತಿರ. ಆಗತಾನೇ ರೆಡಿಯಾಗುತ್ತಿದ್ದ ಅವರು ಕಂಗಳಾನ್ನು ನೋಡುತ್ತಿದ್ದಂತೆ ಯಾಕೆ ಕಂದಾ ಏನಾಯಿತು ಎಂದು ಕೇಳಿದರು. ಅವರು ಕೇಳಿದ್ದೇ ತಡ ಮತ್ತೆ ರೊಂಯ್ಯೋ ಎಂದು ಅಳುತ್ತ ಓ ಲೇಡಿ…ಓ ಲೇಡಿ ಎಂದು ಮತ್ತೆ ಅಳತೊಡಗಿದಳು. ಸಮಾಧಾನ…ಸಮಾಧಾನ…ಬೋಲೋ ಓ ಲೇಡಿ ಕ್ಯಾ ಕಿಯಾ? ಕ್ಯಾ ಕಿಯಾ ಎಂದು ಸೋದಿಮಾಮಾ ಮತ್ತೆ ಕೇಳಿದಾಗ ಕಂಗನಾ ಮೊದಲಿಗಿಂತಲೂ ಜೋರಾಗಿ ಅಳುತ್ತ… ದೇಖಿಯೇ… ಓ ಹೈನಾ… ಓ ಹೈನಾ… ಮೆರೆ ಕು… ಮೆರೆ ಕು ಎಂದು ಗಂಟಲಿನಿಂದ ಧ್ವನಿತೆಗೆದು ಕರ್ಚೀಫಿನಿಂದ ಕಣ್ಣು ಒರೆಸಿಕೊಳ್ಳತೊಡಗಿದಳು. ನ ಸೋದಿ ಮಾಮಾ ಅವರು… ಬೋಲೋ… ಬೋಲೋ ಸಮಾಧಾನಸೆ ಬೋಲೋ… ತುಮಾರೆ ಕು..ತುಮಾರೆ ಕು ಅಂದ ಕೂಡಲೇ..ಈ ಬಾರಿ ಎಲ್ಲರಿಗೂ ಕೇಳುವಂತೆ..ಭೋರೋ ಎಂದು ಅಳತೊಡಗಿದಳು. ಅವಳ ಅಳುಕೇಳಿ ನಾ ಸೇರು, ನೀ ಸೇರು ಎಂದು ಓಡಿಬಂದು ಸೇರತೊಡಗಿದರು. ಆ ಕಡೆಯಿಂದ ಮೆಲ್ಲನೇ ಬಂದ ಪಲ್ಟೀಶ್ ಕುಮಾರ್ ಏನಾಯ್ತಮ್ಮ ಯಾಕಿಷ್ಟು ಅಳುತ್ತಿರುವೆ ಎಂದಾಗ…ಅಂಕಲ್ ಎಂದು ಮತ್ತಷ್ಟು ಅಳತೊಡಗಿದಳು. ಅರೆರೆ ಎನ್ನುತ್ತಿದ್ದಂತೆ ಆ ಕಡೆಯಿಂದ ಉಲ್ಟೇಶ್ ಚಂದ್ರ ಕಾಯ್ಡು ಏಮಾಯ್ತು? ಏಮಾಯ್ತು…ಕೊತ್ತದಿ ಸಂಸದಲು ಎಂದು ಮುಂದೆ ಬಂದಾಗ.. ಮತ್ತೆ ಕಂಗನಾ ಕಾಯ್ಡು ಅಂಕಲ್ ಎಂದು ದುಃಖಿಸತೊಡಗಿದಳು. ಸೋದಿಮಾಮಾರು ಸಿಟ್ಟಿಗೆದ್ದು ಏನಾಯ್ತು ಅದನ್ನಾದರೂ ಹೇಳು ಎಂದು ಜಬರಿಸಿದಂತೆ ಹೇಳಿದಾಗ… ಗಾಬರಿಯಾದ ಕಂಗನಾ ಅಳುನಿಲ್ಲಿಸಿ ಮುಖದ ಮೇಲೆ ನಗು ತಂದು ಆ ಲೇಡಿ ನನಗೆ ಛಟೀರ್ ಎಂದು ಹೊಡೆದಳು ಅಂದ. ಇದು ನನ್ನ ವ್ಯಾಪ್ತಿಗೆ ಬರಲ್ಲ…ಇನ್ನೂ ಯಾವುದೂ ಹಂಚಿಕೆ ಆಗಿಲ್ಲ ಅಂದಾಗ…ಹಾಗೆಂದರೆ ಹೇಗೆ ಜನಾಬ್ ಎಂದು ಪಲ್ಟೇಶ್ ಕುಮಾರ್…ಮೈ ದೇಖ್ ಲೂಂಗಾ ಎಂದು ಅದ್ಯಾರು…ಯಾಕೆ ಹೊಡೆದರು…. ನೀ ಏನಂದೆ? ಅವರೇನಂದರು? ಬ್ಯಾಗಿನಲ್ಲಿ ಏನಿತ್ತು? ಅವರು ಹೊಡೆಯುವಾಗ ಪ್ರೀತಿಯಿಂದ ಹೊಡೆದರಾ ಅಥವಾ ತಮಾಷೆಗೆ ಹೊಡೆದರಾ? ನಿನಗೆ ಹೊಡೆದಾಗ ಕಪಾಳದ ಮೇಲೆ ಬಾರು ಬಿತ್ತಾ? ಎಲ್ಲವನ್ನೂ ಕೇಳುತ್ತಿದ್ದಂತೆ ಮತ್ತೆ ಜೋರಾಗಿ ಅತ್ತ ಕಂಗನಾ ಏನಿಲ್ಲ ಬಿಡಿ ಪಲ್ಟೇಶ್ ಮಾಮಾ ಎಂದು ಅಲ್ಲಿಂದ ಹೋದಳು.