ಸಿಸಿಬಿ ಪೊಲೀಸರ ದಾಳಿ: ಐದು ಲಕ್ಷ ಮೌಲ್ಯದ ಅಕ್ರಮ ಪಡಿತರ ಅಕ್ಕಿ ಪತ್ತೆ; ಐವರ ಬಂಧನ

Advertisement


ಹುಬ್ಬಳ್ಳಿ: ಹುಬ್ಬಳ್ಳಿ ಸಿಸಿಬಿ ಘಟಕದಿಂದ ಅಕ್ರಮವಾಗಿ ಸಂಗ್ರಹಿಸಿದ ಲಕ್ಷಾಂತರ ರೂಪಾಯಿ ಮೌಲ್ಯದ ರೇಷನ್ ಅಕ್ಕಿ ಜಪ್ತಿ ಮಾಡಿ ಐವರನ್ನು ಬಂಧಿಸಿರುವ ಘಟನೆ ನಡೆದಿದೆ.
ಹುಬ್ಬಳ್ಳಿ ಅಮರಗೋಳ ಎಪಿಎಂಸಿ ಯಾರ್ಡದಲ್ಲಿರುವ ದಾಸ್ತಾನು ಮಳಿಗೆ ಮೇಲೆ ದಾಳಿ ಮಾಡಿ ಸುಮಾರು 450 ಚೀಲಗಳಲ್ಲಿ ಸಂಗ್ರಹಿಸಿದ್ದ (ಪ್ರತಿ ಚೀಲ 50 ಕೆ.ಜಿ ತೂಕ) ಅಕ್ಕಿ (5,00,000/- ರೂ) ಹಾಗೂ ನಾಲ್ಕು ವಾಹನಗಳ ಸೇರಿ ಒಂಬತ್ತು ಲಕ್ಷ ಮೌಲ್ಯದ ಅಕ್ಕಿ ಹಾಗೂ ನಾಲ್ಕು ವಾಹನ ಜಪ್ತಿ ಮಾಡಲಾಗಿದೆ.
ಷಣ್ಮುಖಪ್ಪ ತಂದೆ ಚೆನ್ನಪ್ಪ ಬೆಟಗೇರಿ ಈತನು ಸರ್ಕಾರದಿಂದ ಬಿಪಿಎಲ್ ಕಾರ್ಡದಾರರಿಗೆ ಉಚಿತವಾಗಿ ಪೂರೈಸುವ ಪಡಿತರ ಅಕ್ಕಿಯನ್ನು 10 ರಿಂದ 15 ರೂಪಾಯಿ ಬೆಲೆಗೆ ಸಾರ್ವಜನಿಕರಿಂದ ಖರೀದಿಸಿ ಮಂಜುನಾಥ ಹರ್ಲಾಪುರ ಎನ್ನುವರಿಗೆ ಮಾರಾಟ ಮಾಡುತ್ತಿದ್ದು, ಮಂಜುನಾಥ ಹರ್ಲಾಪುರ ಈತನು ಸುಮಾರು 35 ರಿಂದ 40 ರೂಪಾಯಿ ಹೆಚ್ಚಿನ ಬೆಲೆಗೆ ಮಾಹಾರಾಷ್ಟ್ರ ರಾಜ್ಯಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿದ್ದ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದ್ದು ಬಂದಿದ್ದು, ನಾಲ್ಕು ವಾಹನಗಳ ಸಮೇತ ಐವರನ್ನು ಬಂಧಿಸಿ ಹುಬ್ಬಳ್ಳಿ ಎಪಿಎಂಸಿ ನವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಇನ್ಸಪೆಕ್ಟರ್ ಬಾಳಪ್ಪ ಮಂಟೂರ ರವರು ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಸಿಸಿವಿ ಎಸಿಪಿ ನಾರಾಯಣ ವಿ. ಬರಮನಿ ನೇತೃತ್ವದ ತಂಡ ದಾಳಿ ನಡೆಸಿದೆ.