ಸುಮಲತಾ ಅಂಬರೀಶ್ ನಿರ್ಧಾರ ಪ್ರಕಟ

Advertisement

ಮಂಡ್ಯ: ಲೋಕಸಭೆ ಚುನಾವಣೆ ಸಂಬಂಧ ಜನರ ಸಮ್ಮುಖದಲ್ಲೇ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದಿದ್ದ ಸುಮಲತಾ ಅಂಬರೀಶ್‌ ಇಂದು ನಗರದ ಕಾಳಿಕಾಂಬ ಸಮುದಾಯ ಭವನದ ಆವರಣದಲ್ಲಿ ಬೆಂಬಲಿಗರ ಸಭೆ ನಡೆಸಿ ಮಾತನಾಡಿರುವ ಅವರು ನಿಮ್ಮೆಲ್ಲರ ನೆಚ್ಚಿನ ರೆಬಲ್ ಸ್ಟಾರ್ ಅಂಬರೀಶ್ ಅವರಾಗಲಿ, ನಾನಾಗಲಿ ನಮ್ಮ ಕುಟುಂಬವಾಗಲಿ ಯಾವತ್ತಿಗೂ ಅಧಿಕಾರಕ್ಕೆ ಅಂಟಿಕೊಂಡು ಕೂತವರಲ್ಲ. ಮಂಡ್ಯಗಾಗಿ, ನನ್ನ ಮಂಡ್ಯದ ಸ್ವಾಭಿಮಾನಿಗಳ ಸೇವೆಗೆ ಯಾವತ್ತಿಗೂ ನಾವು ಬದ್ಧ. ರಾಜಕೀಯಕ್ಕೆ ಬಂದದ್ದು ನಾನು ಆಕಸ್ಮಿಕ, ರಾಜಕೀಯ ನನಗೆ ಅಂದು ಮತ್ತು ಇಂದು ಕೂಡ ಅನಿವಾರ್ಯವಲ್ಲ, ಅಂಬರೀಷ್ ಅವರ ಅಭಿಮಾನ, ಪ್ರೀತಿ, ಒತ್ತಾಯಕ್ಕೆ ಮಣಿದು ರಾಜಕೀಯಕ್ಕೆ ಬಂದು ಸಂಸದೆಯಾದೆ, 2019 ಕ್ಕಿಂತ ಹೆಚ್ಚಿನ ಸವಾಲು ನಮ್ಮ ಮುಂದೆ ಇದೆ, ಬದಲಾದ ಪರಿಸ್ಥಿತಿ, ಬದಲಾದ ಸವಾಲು ನಮ್ಮ ಮುಂದೆ ಇದೆ, ಎಂಪಿ ಚುನಾವಣೆ ಹುಡುಗಾಟವಲ್ಲ. ನಾನೇನೋ ದ್ವೇಷ ಅಥವಾ ಹಠಕ್ಕೆ ಸ್ಪರ್ಧೆ ಮಾಡಬೇಕು ಎಂದರೆ ನಾನು ಈಗಲೂ ಸ್ಪರ್ಧೆ ಮಾಡಬಹುದು. ಆದರೆ, ಇದರಿಂದ ಯಾರಿಗೆ ನಷ್ಟವಾಗುತ್ತದೆ ಎಂಬುದನ್ನೂ ಕೂಡ ಮುಲಾಜು ನೋಡಬೇಕು. ನಾನು ಸಂಸದೆ ಆಗಬೇಕೆಂದಿದ್ದರೆ ಬಿಜೆಪಿಯ ಗೆಲ್ಲುವ ಹಲವು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬಹುದಿತ್ತು. ನಾನು ಟಿಪಿಕಲ್ ರಾಜಕಾರಣಿಯಲ್ಲ. ಆದರೆ, ನನಗೆ ರಾಜಕಾರಣ ಏನಿದ್ದರೂ ಅದು ಮಂಡ್ಯದಲ್ಲಿ ಮಾತ್ರ. ಇಲ್ಲದಿದ್ದರೆ ನನಗೆ ರಾಜಕೀಯವೇ ಬೇಡ. ಕಾರಣ ಅಂಬರೀಶ್ ಅವರ ಅಭಿಮಾನಿಗಳಿರುವ ಮಂಡ್ಯವನ್ನು ಬಿಟ್ಟು ನಾನೆಲ್ಲೂ ಹೋಗುವುದಿಲ್ಲ. , ನನಗೆ ಗೌರವ ಇಲ್ಲದ ಕಡೆ ನಾನು ಹೋಗೋದಿಲ್ಲ.ಮಂಡ್ಯ ಲೋಕಸಭೆಯಿಂದ ಸ್ಪರ್ದೆ ಮಾಡುತ್ತಿಲ್ಲ, ಆದರೆ ನಾನು ಮಂಡ್ಯ ಬಿಟ್ಟು ಹೋಗಲ್ಲ, ಮೈತ್ರಿ ಅಭ್ಯರ್ಥಿಗೆ ಬೆಂಬಲ ನಿಡುವುದಾಗಿ ಹೇಳಿದ್ದಾರೆ, ಮತ್ತು ಬಿಜೆಪಿ ಸೇರುವುದಾಗಿ ತಿಳಿಸಿದ್ದಾರೆ.

ಕೈಪಿಡಿ ಕಿರುಚಿತ್ರ ಬಿಡುಗಡೆ: ಸುಮಲತಾ ಅಂಬರೀಶ್ ಅವರ ಐದು ವರ್ಷಗಳ ಸಾಧನೆಗಳ ಬಗ್ಗೆ ಕೈಪಿಡಿ ಕಿರುಚಿತ್ರ ಬಿಡುಗಡೆ ಮಾಡಲಾಯಿತು.

ನಟ ದರ್ಶನ ಬೆಂಬಲ: ಅಮ್ಮ ಯಾವತ್ತಿಗೂ ಅಮ್ಮನೆ. ಅವರು ಹಾಳು ಬಾವಿ ಬೀಳು ಅಂದರೆ ಬೀಳ್ತೀನಿ. ಅವರು ಏನೇ ನಿರ್ಧಾರ ತಗೆದುಕೊಂಡರೂ ನಾನು ಅವರ ಪರವಾಗಿ ನಿಲ್ಲುತ್ತೇನೆ ಎಂದು ಮತ್ತೆ ದರ್ಶನ್ ಹೇಳಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್​ ತನಗೆ ಸಿಗುತ್ತದೆ ಎಂದು ಹಾಲಿ ಸಂಸದೆ ಸುಮಲತಾ ಅಂಬರೀಶ್​ ನಿರೀಕ್ಷೆಯಲ್ಲಿದ್ದರು. ಆದರೆ ಕೊನೆ ಹಂತದಲ್ಲಿ ಸುಮಲತಾ ಅಂಬರೀಶ್​ ಅವರಿಗೆ ಟಿಕೆಟ್​ ತಪ್ಪಿದೆ. ಮಂಡ್ಯ ಲೋಕಸಭಾ ಕ್ಷೇತ್ರ ಬಿಜೆಪಿ ಜಿಡಿಎಸ್​ ಬಿಟ್ಟುಕೊಂಟ್ಟಿದ್ದು,​ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ಟಿಕೆಟ್​ ಕೈತಪ್ಪಿದ್ದರಿಂದ ಸಂಸದೆ ಸುಮಲತಾ ಅಂಬರೀಶ್​, ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ನನ್ನ ನಿಲುವಿಗಾಗಿ ಅನೇಕರು ಕಾಯುತ್ತಿದ್ದಾರೆ. ಈಗಾಗಲೇ ಆ ಕುರಿತಂತೆ ಗಂಭೀರ ಚಿಂತನೆ ಕೂಡ ಮಾಡಲಾಗಿದೆ. ನಿಮ್ಮೆಲ್ಲರ ನೆಚ್ಚಿನ ರೆಬಲ್ ಸ್ಟಾರ್ ಅಂಬರೀಷ್ ಅವರಾಗಲಿ, ನಾನಾಗಲಿ ನಮ್ಮ ಕುಟುಂಬವಾಗಲಿ ಯಾವತ್ತಿಗೂ ಅಧಿಕಾರಕ್ಕೆ ಅಂಟಿಕೊಂಡು ಕೂತಿಲ್ಲ. ಮಂಡ್ಯಕ್ಕಾಗಿ, ನನ್ನ ಮಂಡ್ಯದ ಸ್ವಾಭಿಮಾನಿಗಳ ಸೇವೆಗೆ ಯಾವತ್ತಿಗೂ ನಾವು ಬದ್ಧ. ಹಾಗಾಗಿಯೇ ಏನೇ ನಿರ್ಧಾರ ತಗೆದುಕೊಂಡರೂ ನಿಮ್ಮೊಂದಿಗೆ ಚರ್ಚಿಸಿಯೇ ಮುಂದುವರೆಯುವೆ ಎಂದು ಹೇಳಿದ್ದರು ಅದರಂತೆ ಇಂದು ಮಂಡ್ಯದಲ್ಲಿ ಬೆಂಬಲಿಗರ ಸಭೆ ನಡೆಸಿ ಉತ್ತರ ನೀಡಿದ್ದಾರೆ.