ಸುರಕ್ಷತಾ ಕಾಮಗಾರಿ: ರೈಲುಗಳ ಸಂಚಾರ ವಿಳಂಬ

Advertisement

ಹುಬ್ಬಳ್ಳಿ : ಗುಳೇದಗುಡ್ಡ ರೋಡ ಮತ್ತು ವಂದಾಲ ನಿಲ್ದಾಣಗಳ ನಡುವೆ ಅಗತ್ಯ ಸುರಕ್ಷತೆಗೆ-ಸಂಬಂಧಿತ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುವುದರಿಂದ, ಫೆಬ್ರವರಿ 4 ರಿಂದ 29 ರವರೆಗೆ, ರೈಲು ಸಂಖ್ಯೆ 06920 ವಿಜಯಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ವಿಶೇಷ ಮತ್ತು ರೈಲು ಸಂಖ್ಯೆ 17329 ಎಸ್‌ಎಸ್‌ಎಸ್ ಹುಬ್ಬಳ್ಳಿ-ವಿಜಯವಾಡ ಎಕ್ಸ್‌ಪ್ರೆಸ್, ಈ ಎರಡೂ ರೈಲುಗಳು ತಮ್ಮ ಮೂಲ ನಿಲ್ದಾಣದಿಂದ 90 ನಿಮಿಷಗಳ ಕಾಲ ತಡವಾಗಿ ಸಂಚರಿಸಲಿವೆ ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ.