ಸೇತುಬಂಧ್ ಯೋಜನೆಯಡಿ ಕೇಂದ್ರದಿಂದ ₹784 ಕೋಟಿ ಅನುದಾನ

Advertisement

ಬೆಂಗಳೂರು: ಧಾರವಾಡದ‌ ಅಣ್ಣಿಗೇರಿ ಪಟ್ಟಣದ ರೈಲ್ವೆ ಗೇಟ್ ನಂ.19 ಹಾಗೂ ಅಳ್ನಾವರ ಪಟ್ಟಣದ ಅಂಡರ್ ಬ್ರಿಡ್ಜ್ ಅಗಲೀಕರಣ ನಡೆಯಲಿದೆ ಎಂದು ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಹೇಳಿದ್ದಾರೆ, ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು “ಸೇತುಬಂಧ್ ಯೋಜನೆಯಡಿ ರಾಜ್ಯದಲ್ಲಿ ₹784 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ 22 ಮೇಲ್ಸೇತುವೆಗಳ ಪೈಕಿ ಎರಡು ಮೇಲ್ಸೇತುವೆಗಳು ನಮ್ಮ ಧಾರವಾಡದ‌ ಅಣ್ಣಿಗೇರಿ ಪಟ್ಟಣದ ರೈಲ್ವೆ ಗೇಟ್ ನಂ.19 ಹಾಗೂ ಅಳ್ನಾವರ ಪಟ್ಟಣದ ಅಂಡರ್ ಬ್ರಿಡ್ಜ್ ಅಗಲೀಕರಣ ನಡೆಯಲಿದೆ. ಈ ಎರಡೂ ಕಾಮಗಾರಿಗೆ ತಲಾ 30 ಕೋಟಿ ಅನುದಾನ ಇರಿಸಲಾಗಿದ್ದು, ಮುಂದಿನ 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಯೋಜನೆಯಿದೆ. ಈ ಎರಡು ಮಹತ್ತರವಾದ ಯೋಜನೆಯಿಂದ ಖಾನಾಪೂರ – ಅಳ್ನಾವರ – ಹಳಿಯಾಳ ಹಾಗೂ ಅಣ್ಣಿಗೇರಿ – ಹಳ್ಳಕೇರಿ ಹಾಗೂ ಇಬ್ರಾಹಿಮಪುರ ಮುಖ್ಯರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ರೈಲ್ವೆ ಗೇಟ್ ರಹಿತವಾಗಿ ಯಾವುದೇ ಅಡೆತಡೆ ಇಲ್ಲದೆ ಸಂಚರಿಸಬಹುದಾಗಿದೆ. ನಮ್ಮ ಪ್ರಸ್ತಾವನೆಗೆ ಶೀಘ್ರ ಸ್ಪಂದಿಸಿ ಅನುಮೋದಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ‌ ಹಾಗೂ ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಧನ್ಯವಾದಗಳುʼ ಎಂದಿದ್ದಾರೆ.