ಸೈಮಾ 2022: ಅತಿ ಹೆಚ್ಚು ಕೆಟಗರಿಯಲ್ಲಿ ನಾಮಿನೇಟ್ ಆದ ಕನ್ನಡದ ಸಿನಿಮಾ ಯಾವುದು?

Advertisement

ಈ ಬಾರಿಯ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ ಮೊದಲ ದಿನದ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ದಕ್ಷಿಣ ಭಾರತ ಚಿತ್ರರಂಗದ ನಾಲ್ಕೂ ಭಾಷೆಯ ಚಿತ್ರಗಳಿಗೆ ಪ್ರತ್ಯೇಕವಾಗಿ ಈ ಸೈಮಾ ಪ್ರಶಸ್ತಿಯನ್ನು ನೀಡಲಾಗುತ್ತದೆ. ಒಟ್ಟು 19 ವಿಭಾಗಗಳಲ್ಲಿ ಈ ಬಾರಿ ಕಲಾವಿದರ ನಾಮಿನೇಷನ್ ನಡೆದಿತ್ತು ಹಾಗೂ ಸೈಮಾ ವೆಬ್ ತಾಣದಲ್ಲಿ ಸಿನಿ ರಸಿಕರಿಗೆ ಬೆಸ್ಟ್ ಯಾರು ಎಂದು ವೋಟ್ ಮಾಡುವ ಅವಕಾಶವನ್ನು ಸಹ ನೀಡಲಾಗಿತ್ತು. ಇನ್ನು ಕನ್ನಡದ ಪರ ಈ ಬಾರಿಯ ಸೈಮಾ ಪ್ರಶಸ್ತಿಯಲ್ಲಿ ದರ್ಶನ್ ಅಭಿನಯದ ರಾಬರ್ಟ್ ಚಿತ್ರ 10 ಕೆಟಗರಿಯಲ್ಲಿ ನಾಮ ನಿರ್ದೇಶನ ಆಗುವುದರ ಮೂಲಕ ಅತಿ ಹೆಚ್ಚು ಕೆಟಗರಿಯಲ್ಲಿ ನಾಮಿನೇಟ್ ಆದ ಕನ್ನಡದ ಸಿನಿಮಾ ಎನಿಸಿಕೊಂಡಿತ್ತು. ರಾಜ್ ಬಿ ಶೆಟ್ಟಿ ನಿರ್ದೇಶನದ ಗರುಡ ಗಮನ ವೃಷಭವಾಹನ 8 ಕೆಟಗರಿಯಲ್ಲಿ ನಾಮನಿರ್ದೇಶನಗೊಂಡಿತ್ತು.