ಸ್ಕ್ರೂಡ್ರೈವರ್​ನಿಂದ ಚುಚ್ಚಿ ಯುವಕನ ಕೊಲೆ

ಕೊಲೆ
Advertisement

ಬೆಳಗಾವಿ: ಬೆಳಗಾವಿಯಲ್ಲಿ ಸ್ಕ್ರೂಡ್ರೈವರ್​ನಿಂದ ಚುಚ್ಚಿ ಯುವಕನೋರ್ವನನ್ನ ಕೊಲೆ ಮಾಡಿದ ಘಟನೆ ನಡೆದಿದೆ.
ಬೆಳಗಾವಿಯ ಮಹಾಂತೇಶನಗರದ ಬ್ರಿಡ್ಜ್ ಬಳಿ ಇಂದು(ಮೇ.16) ಮಧ್ಯಾಹ್ನ ನಡೆದಿದೆ. ಬೆಳಗಾವಿಯ ಗಾಂಧಿನಗರ ನಿವಾಸಿ ಇಬ್ರಾಹಿಂ ಗೌಸ್(22) ಕೊಲೆಯಾದ ಯುವಕ. ಪ್ರೇಯಸಿ ಜೊತೆ ಬೈಕ್​ನಲ್ಲಿ ಹೊರಟಿದ್ದ ಆಕೆಯ ಸಹೋದರನನ್ನ ಅಡ್ಡಗಟ್ಟಿದ ಆರೋಪಿ ಮುಜಾಮಿಲ್ ಸತ್ತಿಗೇರಿ, ಸ್ಕ್ರೂಡ್ರೈವರ್​ನಿಂದ ಇರಿದು ಪರಾರಿಯಾಗಿದ್ದ. ಗಾಯಾಳು ಗೌಸ್​ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.