ಸ್ಟಾರ್ ಏರ್‌ಲೈನ್ಸ್‌ಗೆ ದಂಡ

Advertisement

ಧಾರವಾಡ: ಏಕಾಏಕಿ ವಿಮಾನ ಸೇವೆ ರದ್ದುಪಡಿಸಿದ ಸ್ಟಾರ್ ಏರ್‌ಲೈನ್ಸ್‌ಗೆ ಧಾರವಾಡ ಗ್ರಾಹಕರ ಆಯೋಗ ದಂಡ ವಿಧಿಸಿದೆ.
ಧಾರವಾಡದ ವಕೀಲರಾದ ಮಹೇಶ್ವರಿ ಉಪ್ಪಿನ ಮತ್ತು ಅವರ ೨೬ ಸಂಗಡಿಗರು ಹುಬ್ಬಳ್ಳಿಯ ಸುರಕ್ಷಾಟರ‍್ಸ್ರವರ ಮೂಲಕ ದೆಹಲಿ, ಹರಿದ್ವಾರ, ಅಯೋಧ್ಯೆ,
ಕಾಶಿ, ಪ್ರಯಾಗರಾಜ, ಮಥುರಾ ಸೇರಿ ಉತ್ತರ ಭಾರತದ ಪ್ರವಾಸ ನಿಗದಿ ಮಾಡಿಕೊಂಡಿದ್ದರು.ದೆಹಲಿಯಿಂದ ಹೊರಟು ಆ ಎಲ್ಲ ಕ್ಷೇತ್ರಗಳ ದರ್ಶನ ಮಾಡಿಸಿಕೊಂಡು ವಾಪಸ್ಸು ದೆಹಲಿಗೆ ಕರೆತರುವ ಜವಾಬ್ದಾರಿ ಹುಬ್ಬಳ್ಳಿಯ ಸುರಕ್ಷಾ ಟೂರ್ಸ್‌ ಮತ್ತು ಟ್ರಾವಲ್ಸ್ ನವರದಾಗಿತ್ತು.
ಹುಬ್ಬಳ್ಳಿಯಿಂದ ದೆಹಲಿ ತಲುಪಲು ಎಲ್ಲ ೨೭ ಜನ ಪ್ರವಾಸಿಗರು ಜೂನ್-೨೦೨೨ ರಲ್ಲಿ ಸ್ಟಾರ್‌ಏರಲೈನ್‌ಮೂಲಕ ಟಿಕೇಟ್ ಬುಕ್ ಮಾಡಿದ್ದರು. ೨೦೨೨ರ ಅಕ್ಟೋಬರ್ ೯ರಂದು ಸ್ಟಾರ್ ಏರ್‌ಲೈನ್ಸ್ ಏಕಾಏಕಿ ಹುಬ್ಬಳ್ಳಿಯಿಂದ ದೆಹಲಿಗೆ ಹೋಗಬೇಕಾದ ಸ್ಟಾರ್ ಏರಲೈನ್ಸ್ ವಿಮಾನಯಾನ ರದ್ದುಪಡಿಸಿತು. ಅಲ್ಲದೇ ಸ್ಟಾರ್‌ ಏರಲೈನ್ಸ್ರವರು ದೆಹಲಿಗೆ ಹೋಗಲು ಬೇರೆ ವ್ಯವಸ್ಥೆ ಮಾಡಿರಲಿಲ್ಲ. ಹಾಗಾಗಿ ಸುರಕ್ಷಾ ಟೂರ‍್ಸ್ ಮಾಲೀಕ ಸುನೀಲ ತೊಗರಿ ತಮ್ಮ ಹಣ ಖರ್ಚು ಹಾಕಿ ಬೇರೆ ಬೇರೆ ಮಾರ್ಗಗಳ ಮೂಲಕ ಪ್ರವಾಸಿಗರಿಗೆ ದೆಹಲಿ ತಲುಪುವ ವ್ಯವಸ್ಥೆ ಮಾಡಿದರು. ದೆಹಲಿಯಿಂದ ಎಲ್ಲ ಕಡೆ ಸುತ್ತಾಡಿ ಪೂರ್ವ ನಿಗದಿತಕಾರ್ಯಕ್ರಮದಂತೆ ಸುರಕ್ಷಾ ಟೂರ‍್ಸ್ ನವರು ಎಲ್ಲ ಪ್ರವಾಸಿಗರನ್ನು ವಾಪಸ್ಸು ಹುಬ್ಬಳ್ಳಿಗೆ ಕರೆತಂದು ಬಿಟ್ಟರು. ವಿಮಾನ ಸೇವೆಯನ್ನು ಏಕಾಏಕಿ ರದ್ದುಪಡಿಸಿದ್ದರಿಂದ ತಮಗೆ ಅನಾನುಕೂಲವಾಯಿತೆಂದು ಸ್ಟಾರ್ ಏರ್‌ಲೈನ್ಸ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮಹೇಶ್ವರಿ ದೂರು ಸಲ್ಲಿಸಿದರು.
ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಹುಬ್ಬಳ್ಳಿಯಿಂದ ದೆಹಲಿಗೆ ಕರೆದೊಯ್ಯುವ ಹೊಣೆಗಾರಿಕೆ ತನ್ನದಲ್ಲದಿದ್ದರೂ ಸುರಕ್ಷಾ ಟೂರ್ಸ್‌ ಮಾಲೀಕ ಸುನೀಲ ತೊಗರಿ ತನ್ನ ಗ್ರಾಹಕರಿಗೆ ತೊಂದರೆ ಆಗಬಾರದು ಅಂತಾ ರ‍್ಯಾಯ ವ್ಯವಸ್ಥೆ ಮಾಡಿರುವುದು ಪ್ರಶಂಸನೀಯ. ಆದರೆ ವಿಮಾನ ರದ್ದುಪಡಿಸಿ ಪ್ರವಾಸಿಗರಿಗೆ ಬೇರೆ ವ್ಯವಸ್ಥೆ ಮಾಡದೇ ಇರುವುದರಿಂದ ಸ್ಟಾರ್ ಏರಲೈನ್ಸ್ರವರು ಎಲ್ಲ ದೂರುದಾರರಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗ ತನ್ನತೀರ್ಪಿನಲ್ಲಿ ಅಭಿಪ್ರಾಯ ಪಟ್ಟಿದೆ.
ಸ್ಟಾರ್‌ಏರಲೈನ್ಸ್ರವರು ಎಲ್ಲ ೨೭ ದೂರುದಾರರಿಗೆ ತಲಾ ರೂ. ೨೫,೦೦೦ಗಳನ್ನು ಪರಿಹಾರ ಮತ್ತು ರೂ. ೫,೦೦೦ ಗಳನ್ನು ಪ್ರಕರಣದ ನಡೆಸಿದ ಖರ್ಚು ವೆಚ್ಚ
ರೂ. ೮,೧೦,೦೦೦ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಸಂದಾಯ ಮಾಡುವಂತೆ ಸ್ಟಾರ್ ಏರಲೈನ್ಸ್ರವರಿಗೆ ನಿರ್ದೇಶನ ನೀಡಿದೆ. ಬೇರೆ ವಿಮಾನ
ವ್ಯವಸ್ಥೆ ಮಾಡಿದ್ದರಿಂದ ತಾನು ರೂ. ೧,೬೬,೮೨೩ ಗಳನ್ನು ಹೆಚ್ಚಿಗೆ ಖರ್ಚು ಮಾಡಿದ್ದೇನೆ ಅನ್ನುವ ಸುರಕ್ಷಾ ಟೂರ್ಸ್‌ ಮಾಲೀಕ ಸುನೀಲ ತೊಗರಿಯವರ ಬೇಡಿಕೆಯನ್ನು ಆಯೋಗ ಪುರಸ್ಕರಿಸಿದೆ. ರೂ. ೧,೬೬,೮೨೩/-ಗಳನ್ನು ಒಂದು ತಿಂಗಳ ಒಳಗಾಗಿ ಸುರಕ್ಷಾ ಟೂರ್ಸ್‌ನವರಿಗೆ ಕೊಡುವಂತೆ ಸ್ಟಾರ್‌ ಏರಲೈನ್ಸ್ ನವರಿಗೆ ಆಯೋಗ ತಿಳಿಸಿದೆ. ಒಂದು ವೇಳೆ ೧ ತಿಂಗಳಲ್ಲಿ ಹಣ ಸಂದಾಯ ಮಾಡದಿದ್ದರೆ ತೀರ್ಪು ನೀಡಿದ ದಿನದಿಂದ ಶೇ. ೮ರ ಬಡ್ಡಿ ಕೊಡಲು ಆದೇಶ ನೀಡಿದೆ.