ಸ್ಯಾಂಟ್ರೋ ರವಿ 20 ವರ್ಷದ ಇತಿಹಾಸವಿದೆ: ಸೂಕ್ತ ತನಿಖೆ – ಸಿಎಂ ಬಸವರಾಜ ಬೊಮ್ಮಾಯಿ

ಬೊಮ್ಮಾಯಿ
Advertisement

ಹುಬ್ಬಳ್ಳಿ : ಸ್ಯಾಂಟ್ರೋ ರವಿ ವಿಚಾರದಲ್ಲಿ ಈಗಾಗಲೇ ಸೂಕ್ತ ತನಿಖೆ ಮಾಡಲಾಗಿದ್ದು ಆತನ ಎಲ್ಲಾ ಆಸ್ತಿಪಾಸ್ತಿಗಳನ್ನ ಮುಟ್ಟು ಗೋಲು ಹಾಕಿಕೊಳ್ಳಲಾಗಿದೆ. ಆತನಿಗೆ 20 ವರ್ಷದ ಇತಿಹಾಸವಿದೆ. ಈ ಹಿಂದೆ ಆತನೊಂದಿಗೆ ಹಲವರು ಸಂಪರ್ಕದಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯ ಆದರ್ಶನಗರದಲ್ಲಿನ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ ವಿಚಾರದಲ್ಲಿ ಹೆಚ್ಚು ಮಹತ್ವ ಕೊಡುವುದು ಬೇಡ. ನಮ್ಮ ಪೊಲೀಸರು ವಿಚಾರಣೆ ಮಾಡುತ್ತಾರೆ ಎಂದರು.
ಸ್ಯಾಂಟ್ರೋ ರವಿ ನಡೆದ ಎಲ್ಲ ಅವ್ಯವಾರ ಅವರ ಹಿಂದಿನ‌ ಸರಕಾರಗಳ ಕಾಲದಲ್ಲಿಯೇ ಆದ್ದರಿಂದ ಇದರಲ್ಲಿ ಯಾರ ಯಾರ ಪಾತ್ರ ಎಷ್ಟೋ ಇದೆ. ಇನ್ನೂ ಕಾಂಗ್ರೆಸ್ ಪೇ ಸಿಎಂ, ಸ್ಯಾಂಟ್ರೋ ರವಿ ಅಭಿಯಾನವನ್ನು ಜನ ನೋಡುತ್ತಿದ್ದಾರೆ. ಅವರ ಕಾಲದಲ್ಲಿ ಸ್ಯಾಂಟ್ರೋ ಪ್ರಕರಣಗಳು ನಡೆದಿವೆ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತದೆ ಎಂದರು.

ಪರಿಸರ ಇಲಾಖೆ ಮಾಹಿತಿ ಕೇಳಿದೆ:
ಮಹದಾಯಿ ಯೋಜನೆ ಜಾರಿಯಲ್ಲಿ ಕೇಂದ್ರ ಪರಿಸರ ಇಲಾಖೆ ಸ್ಪಷ್ಟನೆ ಕೇಳಿದೆ ಅದನ್ನ ಕೊಡುತ್ತೇವೆ. ಇದರಲ್ಲಿ ಅಂತಹ ಆತಂಕ ಪಡುವ ವಿಚಾರ ಇಲ್ಲ. ಹುಬ್ಬಳ್ಳಿ ಅಂಕೋಲಾ ಯೋಜನೆ ಜಾರಿಯಲ್ಲಿ ಈ ರೀತಿ ಕೇಳಿತ್ತು. ಇಲ್ಲಿಯೂ ಅದೇ ರೀತಿ ಕೇಳಿದೆಯಷ್ಟೇ ಎಂದರು. ಈ ಕುರಿತು ಕೇಂದ್ರ ಪರಿಸರ ಇಲಾಖೆ ಕೇಳಿದ ಮಾಹಿತಿಯನ್ನ ಕೊಡುತ್ತೇವೆ ಎಂದರು.

ಮೀಸಲಾತಿ ಕಾನೂನು ಚೌಕಟ್ಟಿನಲ್ಲಿ ಕೊಡುತ್ತೇವೆ:
ಪಂಚಮಸಾಲಿ ಸಮಾಜ ಮೀಸಲಾತಿ ಬೇಡ ಎಂದು ತಕಾರರು ತೆಗೆದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಈ ಕುರಿತು ಈಗಾಗಲೇ ಸ್ಪಷ್ಟನೆ ನೀಡಲಾಗಿದೆ. ಈ ಸಮುದಾಯಗಳಿಗೆ ಮೀಸಲಾತಿ ನೀಡಲು ಮೊದಲ ಹೆಜ್ಜೆ ಇಡಲಾಗಿದೆ. ಸಂವಿಧಾನಬದ್ಧವಾಗಿ ಮೀಸಲಾತಿ ಕೊಡುವ ಕುರಿತು ಸಹ ಚಿಂತನೆ ನಡೆದಿದೆ ಎಂದರು.