ಸ್ವಚ್ಛ ಸರ್ವೇಕ್ಷಣ ಅಭಿಯಾನ ದೇಶಕ್ಕೆ ಹು-ಧಾ ಮಹಾನಗರಕ್ಕೆ ೬೧ನೇ ಸ್ಥಾನ

Advertisement


ಹುಬ್ಬಳ್ಳಿ: ಕೇಂದ್ರ ನಗರಾಭಿವೃದ್ದಿ ಸಚಿವಾಲಯ ಕೈಗೊಂಡ ಸ್ವಚ್ಛ ಸರ್ವೇಕ್ಷಣ ಅಭಿಯಾನ ಸಮೀಕ್ಷೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ ೬೧ನೇ ಸ್ಥಾನ ಲಭಿಸಿದೆ ಎಂದು ಮೇಯರ್ ಈರೇಶ ಅಂಚಟಗೇರಿ ತಿಳಿಸಿದ್ದಾರೆ.
ದೇಶದ ಒಟ್ಟು ೩೮೨ ಮಹಾನಗರಗಳನ್ನು ಸರ್ವೇಕ್ಷಣೆಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ನಡೆಸಿತ್ತು. ಇದರಲ್ಲಿ ೬೧ ನೇ ಸ್ಥಾನ ಲಭಿಸಿದ್ದು, ರಾಜ್ಯದ ಮಹಾನಗರಗಳಲ್ಲಿ ೨ನೇ ಸ್ಥಾನವನ್ನು ಪಡೆದಿದೆ ಎಂದು ಹೇಳಿದ್ದಾರೆ.
ಕಳೆದ ಬಾರಿ ನಡೆದ ಸರ್ವೇಕ್ಷಣೆಯಲ್ಲಿ ೮೪ನೇ ಸ್ಥಾನವನ್ನು ಪಡೆದಿತ್ತು. ಈಗ ೬೧ನೇ ಸ್ಥಾನ ಪಡೆದಿದೆ. ಇದಕ್ಕೆ ನಗರದ ನಿವಾಸಿಗಳು, ಪೌರಕಾರ್ಮಿಕರ ಅವಿರತ ಶ್ರಮ, ಮಹಾನಗರ ಪಾಲಿಕೆ ಸಿಬ್ಬಂದಿ, ಪಾಲಿಕೆ ಸದಸ್ಯರು, ಅಧಿಕಾರಿಗಳು ಕಾರಣರಾಗಿದ್ದು, ಅವರೆಲ್ಲರೂ ಅಭಿನಂದನಾರ್ಹರು ಎಂದು ಮೇಯರ್ ತಿಳಿಸಿದ್ದಾರೆ.