ತಾವರಗೇರಾ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಿಲ್ಲಾ ನಗರಾಭಿವೃದ್ಧಿ, ಕೊಪ್ಪಳ, ಪಪಂ ಸಹಯೋಗದೊಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ “ಪ್ರತಿ ಮನೆ ಮನೆಗೂ ರಾಷ್ಟ್ರೀಯ ಧ್ವಜ’ ಅಭಿಯಾನ ಕಾರ್ಯಕ್ರಮ ನಡೆಯಿತು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಒನಕೆ ಓಬವ್ವ, ಡಾ. ಬಾಬಾಸಾಹೇಬ್ ಅಂಬೇಡಕರ್, ಗಾಂಧೀಜಿ ಹಾಗೂ ಅನೇಕ ದೇಶಭಕ್ತರು, ಸ್ವಾತಂತ್ರ್ಯ ಹೋರಾಟಗಾರರ ಛಗ್ಮವೇಷ ಧರಿಸಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಧ್ವಜ ಕೈಯಲ್ಲಿ ಹಿಡಿದು ಪ್ರಭಾತಪೇರಿ ನಡೆಸಿದರು. ಸಾರ್ವಜನಿಕರಿಗೆ ೭೫ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರತಿ ಮನೆ-ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ಸಂದೇಶ ಕೊಟ್ಟು ಜನಜಾಗೃತಿ ಮೂಡಿಸಿದರು.
ಶಾಲೆಯ ಮುಖ್ಯ ಗುರುಗಳಾದ ಈರಪ್ಪ ಸೂಡಿ, ಮಲಂಗಸಾ ವಾಲೇಕಾರ, ದೈಹಿಕ ಶಿಕ್ಷಣ ಶಿಕ್ಷಕರಾದ ಪರಸಪ್ಪ ಹೊಸಮನಿ, ಶ್ಯಾಮಣ್ಣ, ತ್ರಿವೇಣಿ ಮುಖಾರಿ, ಮಂಜುಳಾ ಹೂಗಾರ, ಪರಶುರಾಮ, ನಾಗರಾಜ ಸಾಲಮನಿ. ಶಾಲಾ ಮಕ್ಕಳು ಇದ್ದರು.