ಹಣ ಹೂಡಿಕೆ ಹೆಸರಿನಲ್ಲಿ ಮಹಿಳೆಗೆ ೪೭ ಲಕ್ಷ ರೂ ವಂಚನೆ

Advertisement

ಹುಬ್ಬಳ್ಳಿ: ದೊಡ್ಡ ಕಂಪನಿ ಹಾಗೂ ಸೆಲೆಬ್ರಿಟಿಗಳಿಗಾಗಿ ಯೂಟ್ಯೂಬ್ ಚಾನಲ್‌ಗಳನ್ನು ವೀಕ್ಷಿಸಿ ಚಂದಾದಾರರನ್ನು ಪ್ರಚಾರ ಮಾಡುತ್ತಿದ್ದು, ನಾವು ಹೇಳಿದಂತೆ ದಿನಕ್ಕೆ ೨೦ ರಿಂದ ೩೦ ಕಾರ್ಯಗಳನ್ನು ಮಾಡಿದರೆ, ದಿನಕ್ಕೆ ೩ ಸಾವಿರಕ್ಕಿಂತ ಹೆಚ್ಚು ಗಳಿಸಬಹುದು ಎಂದು ನಂಬಿಸಿ, ಧಾರವಾಡದ ಮಹಿಳೆಗೆ ೪೭ ಲಕ್ಷ ರೂಪಾಯಿ ವಂಚಿಸಲಾಗಿದೆ.
ಧಾರವಾಡದ ಶಿಲ್ಪಾ ಡಿ, ಎಂಬುವರಿಗೆ ವಂಚಿಸಲಾಗಿದೆ. ನಾನು ಮಿಸ್ ಮಾಯಾ ಕುಮಾಹ್, ಎಚ್‌ಆರ್ ಸ್ಟುಡಿಯೋ ಮೊಸಾಯಿಕ್ ಮಾರ್ಕೆಟಿಂಗ್ ಕಂಪನಿಯಿಂದ ಮಾತನಾಡುವುದಾಗಿ ನಂಬಿಸಿದ್ದಾರೆ.
ನಂತರ ದಿನಕ್ಕೆ ಮನೆಯಿಂದಲೇ ೫೦೦ ರಿಂದ ೩೦೦೦ ಸಾವಿರ ಗಳಿಸಬಹುದು. ಅದಕ್ಕೆ ನೀವು ಪ್ರತಿದಿನ ಯೂಟ್ಯೂಬ್‌ನಲ್ಲಿ ನೀಡುವ ಕಾರ್ಯಗಳನ್ನು ಮಾಡಬೇಕು ಎಂದು ತಿಳಿಸಿ ಮೊದ ಮೊದಲು ಸ್ವಲ್ಪ ಹಣವನ್ನು ಹಾಕಿ ನಂಬಿಸಿದ್ದು, ಬಂತರ ಹಣ ಹೂಡಿಕೆ ಮಾಡಲು ಹೇಳಿ ಮಹಿಳೆಯ ವಿವಿಧ ಖಾತೆಗಳಿಂದ ೪೭ ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಈ ಕುರಿತು ಹುಬ್ಬಳ್ಳಿ-ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.