ಹರಿನಾಮದ ಬಲ

PRATHAPPHOTOS.COM
Advertisement

ಭಗವಂತ ನಮ್ಮನ್ನು ಯಾವತ್ತಿಗೂ ಕೈಬಿಡುವುದಿಲ್ಲ ನಮ್ಮನ್ನು ರಕ್ಷಣೆ ಮಾಡುತ್ತಾನೆ ಎಂಬ ವಿಶ್ವಾಸವೇ ನಮಗೆ. ಎಲ್ಲ ತರಹದ ಫಲವನ್ನು ನೀಡುತ್ತದೆ ವಿಶ್ವಾಸ ನೀಡುತ್ತದೆ. ಎಂದು ಕೃಷ್ಣಾಮೃತ ಮಹಾರ್ಣವ'ದಲ್ಲಿ ಶ್ರೀಮದ್ ಆನಂದತೀರ್ಥ ಭಗವತ್ಪಾದಾಚಾರ್ಯರು ನಮಗೆಲ್ಲ ತಿಳಿಸುತ್ತಾರೆ.
ವೇದವ್ಯಾಸದೇವರು ನಾರದಪುರಾಣ ವಿಷ್ಣುಧರ್ಮೋತ್ತರ ಪುರಾಣಗಳಲ್ಲಿ ಯಾವ ಸಂದೇಶವನ್ನು ನೀಡಿದ್ದಾರೋ ಅದನ್ನು ಶ್ರೀಮದಾಚಾರ್ಯರು ಕೃಷ್ಣಾಮೃತ ಮಹಾರ್ಣವದಲ್ಲಿ ಸಂಗ್ರಹಿಸಿದ್ದಾರೆ.
ಅಚ್ಯುತಾನಂತ ಗೋವಿಂದ ನಾಮೋಚ್ಚಾರಣ ಭೇಷಜ್ಯಾತ
ನಷ್ಯಂತಿ ಸಕಲ ರೋಗ ಸತ್ಯಂ ಸತ್ಯಂ ವದಾಮ್ಯಹಂ”
ಎಂದು ಸ್ವತಃ ಭಗವಂತನೇ ನುಡಿದ ಮಾತ ಇದು.
ಸತ್ಯನಾದ ಪರಮಾತ್ಮ ಸತ್ಯ ಸಂಕಲ್ಪನಾದ ಭಗವಂತ ಸತ್ಯವಚನನಾದ ಭಗವಂತ ಸತ್ಯಂ ಸತ್ಯಂ ವದಾಮ್ಯಹಂ ಎಂದು ಹೇಳುತ್ತಾರೆ. ಆದರೆ ಅಭಯ ಹಸ್ತ ಅಮೃತಹಸ್ತ ನಮ್ಮ ತಲೆಯ ಮೇಲೆ ಇದೆ ಎನ್ನುವ ಪೂರ್ಣ ಭರವಸೆ ವಿಶ್ವಾಸ ಇರಲಿ ಭರವಸೆ ಇರಲಿ ಆ ಭಗವಂತನ ಚಿಂತನೆ ನಾಮಸ್ಮರಣೆ ಇರಲಿ. ಯಾವುದೇ ರೀತಿಯ ಚಿಂತೆ ಭಯಕ್ಕೆ ಅವಕಾಶ ಬೇಡ… ಭಯದಿಂದ ಜೀವನ ನಡೆಸುವುದು ಬೇಡ ಎಚ್ಚರಿಕೆಯಿಂದ ಜೀವನ ನಡೆಸೋಣ. ಭಗವಂತನಲ್ಲಿ ಪೂರ್ಣವಾದ ನಂಬಿಕೆಯನ್ನು ಇಟ್ಟು ಧೈರ್ಯದಿಂದ ಆತ್ಮವಿಶ್ವಾಸದಿಂದ ಜೀವನವನ್ನು ಸಾಗಿಸೋಣ.
ಪರಮಾತ್ಮನ ಮೇಲಿನ ನಂಬಿಕೆಯನ್ನು ಇಡುವುದರಿಂದ ನಮಗೆ ಸರ್ವಮುಖವಾದ ರಕ್ಷಣೆ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ. ನಾಮತ್ರಯದ ಚಿಂತನ ಮಾಡುವಾಗ ಸ್ಮರಣೆ ಮಾಡುವಾಗ ಅರ್ಥ ಅನುಸಂಧಾನ ಪೂರ್ವಕವಾಗಿ ಭಕ್ತಿಯಿಂದ ಭಗವಂತನನ್ನು ಸ್ಮರಿಸಿ, ನಮಿಸಿ, ಪ್ರಾರ್ಥಿಸಿ ಅವನ ಅನುಗ್ರಹ ಸಂಪಾದಿಸೋಣ. ಭಗವಂತನನ್ನು ಅಚ್ಯುತ ಅನಂತ ಗೋವಿಂದ ಎಂಬುದಾಗಿ ಸ್ಮರಿಸಬೇಕು.