ಹಳಿ ತಪ್ಪಿದ ಗೂಡ್ಸ್ ರೈಲು

BIJAPUR ̤jpg
Advertisement

ವಿಜಯಪುರ : ಹಳಿ ತಪ್ಪಿದ ಗೂಡ್ಸ್ ರೈಲಿನಿಂದ ಅನಾಹುತ ತಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಮುಳವಾಡ ರೈಲು ನಿಲ್ದಾಣ ಬಳಿ ನಡೆದಿದೆ.
ರೈಲ್ವೆ ಗೂಡ್ಸ್ ಬೋಗಿಗಳು ಕಟ್ ಆಗಿ ಉರುಳಿಬಿದ್ದ ಆರು ಬೋಗಿಗಳು ಜಖಂ ಆಗಿವೆ. ಚಲಿಸುತ್ತಿದ್ದ ವೇಳೆ ಏಕಾಏಕಿ ರೈಲ್ವೆಯ ಆರು ಬೋಗಿಗಳು ಕಟ್ ಆಗಿವೆ. ಅದೃಷ್ಠ ವಶಾತ್ ಹೆಚ್ಚಿನ ಹಾನಿಯಾಗಿಲ್ಲ, ಯಾವುದೇ ಪ್ರಾಣ ಹಾನಿಯಾಗಿಲ್ಲ.
ಆರು ಬೋಗಿಗಳು ಟ್ರ‍್ಯಾಕ್ ನಿಂದ ಕಟ್ ಆಗಿ ಹೊರಗಡೆಗೆ ಬಿದ್ದಿವೆ. ವಿಜಯಪುರ ರೈಲ್ವೆ ಪೊಲೀಸರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ರೈಲು ಬೋಗಿಗಳು ಉರುಳಿಬಿದ್ದ ಹಿನ್ನೆಲೆಯಲ್ಲಿ ಸೊಲ್ಲಾಪುರ ಹಾಗೂ ವಿಜಯಪುರ ಮಾರ್ಗದಿಂದ ಹುಬ್ಬಳ್ಳಿ ಮಾರ್ಗಕ್ಕೆ ಹೋಗಬೇಕಿದ್ದ ಆರು ರೈಲುಗಳ ಸಂಚಾರ ಕ್ಯಾನ್ಸಲ್ ಮಾಡಲಾಗಿದೆ.
ರೇಲ್ವೆ ಇಲಾಖೆ ಅಧಿಕಾರಿಗಳಿಂದ ಸೋಮವಾರ ಸಂಚರಿಸಬೇಕಿದ್ದ ಆರು ರೈಲು ಕ್ಯಾನ್ಸಲ್ ಮಾಡಿರುವ ಕುರಿತು ಸ್ಪಷ್ಟನೆ ನೀಡಲಾಗಿದೆ.