ಹವಾಮಾನ ಉಪಗ್ರಹ ಉಡಾವಣೆ ಯಶಸ್ವಿ

Advertisement

ಶ್ರೀಹರಿಕೋಟಾ: ಇಸ್ರೋ ಭಾರತದ ನೂತನ ಹವಾಮಾನ ಉಪಗ್ರಹವಾದ ಇನ್ಸಾಟ್‌-3ಡಿಎಸ್‌ ಅನ್ನು ಶ್ರೀಹರಿಕೋಟಾದ ಸತೀಶ್‌ ಧವನ್‌ ಸ್ಪೇಸ್‌ ಸೆಂಟರ್‌ನಿಂದ ಉಡಾವಣೆ ಮಾಡಿದೆ.
ಹವಾಮಾನ ಬದಲಾವಣೆಯು ಭೂಮಂಡಲದ ಮೇಲೆ ಹಾನಿಯನ್ನುಂಟುಮಾಡುತ್ತಿರುವ ಸಮಯದಲ್ಲಿ ಭಾರತಕ್ಕೆ ಹವಾಮಾನ ಮುನ್ಸೂಚನೆಯ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಈ ಮಿಷನ್ ಹೊಂದಿದೆ.
ಸೈಕ್ಲೋನ್‌ಗಳಂತಹ ನಿಖರ ಮಾಹಿತಿಯನ್ನು ಪಡೆದು ಜನರಿಗೆ ಒದಗಿಸಲು ಭವಿಷ್ಯದಲ್ಲಿ ಈ ಉಪಗ್ರಹ ಉಪಯುಕ್ತವಾಗಲಿದೆ ಎಂದಿದ್ದಾರೆ. ಈಗಾಗಲೇ ಹವಾಮಾನ ಮುನ್ಸೂಚನೆಗಳ ಕುರಿತು ಮಾಹಿತಿ ನೀಡುವ ಮೂರು ಉಪಗ್ರಹಗಳನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.