ಹಾವೇರಿ: ಗ್ಯಾಂಗ್ ರೇಪ್ ಬಳಿಕ ಮತ್ತೊಂದು ನೈತಿಕ ಪೊಲೀಸ್ ಗಿರಿ

Advertisement

ಬ್ಯಾಡಗಿ: ಹಾನಗಲ್ಲ ಪ್ರಕರಣದ ಬೆನ್ನಲ್ಲೇ ಬ್ಯಾಡಗಿಯಲ್ಲಿ ಮತ್ತೊಂದು ಪ್ರಕರಣ ನಡೆದಿದ್ದು ಅನ್ಯಕೋಮಿನ ಯುವಕ ಯುವತಿಯನ್ನು ಅನ್ಯಕೋಮಿನ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಬ್ಯಾಡಗಿ ಪಟ್ಟಣದಲ್ಲಿ ಶುಕ್ರವಾರ ಸಂಜೆ ಜರುಗಿದೆ..
ಹಾವೇರಿ ನಗರದ ಹುಮ್ನಾಬಾದ್ ಓಣಿಯ ಹುಡುಗಿ ರುಕ್ಸಾ ಮರ್ದಾನಸಾಬ್ ದೇವಿಹೊಸೂರ ಮತ್ತು ಹಾವೇರಿ ತಾಲೂಕ ಮಾಚಾಪುರ ಗ್ರಾಮದ ಜಗದೀಶ ಕರೇಗೌಡ್ರ ಈರ್ವರು ಥಳಿತಕ್ಕೆ ಒಳಗಾದವರು, ಈರ್ವರು ಒಂದೇ ಕಡೆ ಕೆಲಸ ಮಾಡುತ್ತಿದ್ದು ರುಕ್ಸಾನಾ ಬ್ಯಾಡಗಿಯಲ್ಲಿರುವ ತನ್ನ ಅತ್ತೆ ಮನೆಗೆ ರಜಬ್ ಹಬ್ಬಕ್ಕೆಂದು ಆಗಮಿಸಿದ್ದಾಳೆ. ಈ ವೇಳೆ ಬಸವೇಶ್ವರ ನಗರದ ಈಶ್ವರ ದೇವಸ್ಥಾನದ ಬಳಿ ಮಾತನಾಡಿಕೊಂಡು ಬಂದಿದ್ದನ್ನು ಗಮನಿಸಿದ ಮುಸ್ಲಿಂ ಯವಕರ ಗುಂಪು ತಪ್ಪಾಗಿ ಅವರನ್ನು ಅರ್ಥೈಸಿಕೊಂಡು ಏಕಾಏಕಿ ಹಲ್ಲೆ ನಡೆಸಿದೆ.
ಇದರಲ್ಲಿ ಪ್ರಮುಖ ಆರೋಪಿಯಾಗಿರುವ ಅಬ್ದುಲ್ ಖಾದರ್ ಮುದಗಲ್ ಇನ್ನುಳಿದಂತೆ ಮನ್ಸೂರ್ ಹಜರತ್‌ಸಾಬ್ ತಾಂಡೂರ, ಮೆಹಬೂಬ್ ಸತ್ತಾರಖಾನ್ ಬಡಿಗೇರ, ರಿಯಾಜ್ ಅಮಾನ್‌ಸಾಬ್ ಹಲಗೇರಿ, ಅಲ್ಫಾಜ್ ಫಜಲಸಾಬ್ ಬಳಿಗಾರ, ಅಬ್ದುಲ್ ಚಮನಸಾಬ್ ದೇಸೂರ, ಖಾದರ್ ಜಹಾಂಗೀರಸಾಬ್ ಕನ್ಯಕಾ, ಸಲೀಂಸಾಬ್ ಖಾಜಿ, ಮೆಹಬೂಬ್ ದಾವಲಸಾಬ್ ಹಲಗೇರಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಹಲ್ಲೆ ನಡೆದ ಘಟನೆಯಿಂದ ಪಟ್ಟಣದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು ಸ್ಥಳದಲ್ಲೇ ಡಿವೈಎಸ್‌ಪಿ ಮುಕ್ಕಾಂ ಹೂಡಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಜರುಗಿಸಿದ್ದಾರೆ.