ಹೀನ ಮನಸ್ಥಿತಿ ವಿರೋಧಿಸುತ್ತಿರುವುದು ಹಿಂಸೆಯ ಮಾರ್ಗದಿಂದಲ್ಲ, ವೈಚಾರಿಕ ಮಾರ್ಗದಿಂದ

Advertisement

ಬೆಂಗಳೂರು: ಹೀನ ಮನಸ್ಥಿತಿಯನ್ನು ನಾವು ವಿರೋಧಿಸುತ್ತಿರುವುದು ಹಿಂಸೆಯ ಮಾರ್ಗದಿಂದಲ್ಲ, ವೈಚಾರಿಕ ಮಾರ್ಗದಿಂದ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು “ರಾಜ್ಯವನ್ನು “ಸರ್ವ ಜನಾಂಗ ಶಾಂತಿಯ ತೋಟ”ವನ್ನಾಗಿಸುವ ನಮ್ಮ ಕಾಯಕದಲ್ಲಿ ಎಷ್ಟೇ ಅಡೆತಡೆಗಳು ಎದುರಾದರೂ ನಮ್ಮ ಜನಪರ ಕೆಲಸಗಳನ್ನು ನಿಲ್ಲಿಸುವ ಶಕ್ತಿ ಯಾರಿಗೂ ಇಲ್ಲ.
ನಾವು ಮೊದಲಿನಿಂದಲೂ ವಿರೋಧಿಸುತ್ತಿರುವುದು ಇಂತಹ ಮನಸ್ಥಿತಿಗಳನ್ನೇ. ಈ ಹೀನ ಮನಸ್ಥಿತಿಯನ್ನು ನಾವು ವಿರೋಧಿಸುತ್ತಿರುವುದು ಹಿಂಸೆಯ ಮಾರ್ಗದಿಂದಲ್ಲ, ವೈಚಾರಿಕ ಮಾರ್ಗದಿಂದ. ಬುದ್ಧ, ಬಸವಣ್ಣ, ಅಂಬೇಡ್ಕರ್‌ ಅವರ ತತ್ವದ ಹಾದಿಯಲ್ಲಿ ವೈಚಾರಿಕತೆಯಿಂದ ಪ್ರಜಾಸತ್ತಾತ್ಮಕವಾಗಿ ನಾವು ವಿರೋಧ ಮಾಡುತ್ತಿದ್ದೇವೆ.
ಸಂವಿಧಾನಾತ್ಮಕವಾಗಿ, ವೈಚಾರಿಕವಾಗಿ ಎದುರಿಸಲಾಗದ ಹೇಡಿಗಳು ಮೊದಲಿಂದಲೂ ಇದೇ ರೀತಿ ಹಿಂಸಾತ್ಮಕ ಧೋರಣೆಯನ್ನು ಅನುಸರಿಸುತ್ತಾ ಬಂದಿದ್ದಾರೆ. ಈ ವಿಚಾರಹೀನ ಮನಸ್ಥಿತಿಗಳು ಬುದ್ಧನನ್ನೂ ಹಿಂಸಿಸಿದರು, ಬಸವಣ್ಣನ ಜೀವಕ್ಕೂ ಕಂಟಕವಾದರು. ಇಂದು ಅದೇ ಮನಸ್ಥಿತಿಯವರು ನಮ್ಮನ್ನು ಬೆದರಿಸಲು ವಿಫಲ ಪ್ರಯತ್ನ ಮಾಡುತ್ತಿದ್ದಾರೆ. ಭಯ ಬಿತ್ತುವ ಇಂತಹ ಪಟ್ಟಭದ್ರ ಹಿತಾಸಕ್ತಿಗಳನ್ನು ರಾಜ್ಯದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕರೂ ವಿರೋಧಿಸಬೇಕಿದೆ. 2024ರ ಚುನಾವಣೆಯಲ್ಲಿ ಕನ್ನಡಿಗರಾದ ನಾವು ಈ ಹಿಂಸಾತ್ಮಕ, ಮನುವಾದದ ಮನಸ್ಥಿತಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದಿದ್ದಾರೆ.