ಹು-ಧಾ ಪೊಲೀಸ್ ಆಯುಕ್ತರಾಗಿ ಮೊದಲ ಬಾರಿ ಎಸ್‌ಪಿ ಕೇಡರ್ ಅಧಿಕಾರಿ

Advertisement

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮೀಷನರ್ ಹುದ್ದೆಯನ್ನು ಡಿಗ್ರೇಡ್ ಮಾಡಲಾಗಿದ್ದು, ಐಜಿ ಕೇಡರ್ ಅಧಿüಕಾರಿಯ ಬದಲು ಎಸ್‌ಪಿ ಕೇಡರ್ ಅಧಿಕಾರಿಯನ್ನು ಆಯುಕ್ತರನ್ನಾಗಿ ನೇಮಿಸಲಾಗಿದೆ.
ಹೆಚ್ಚುವರಿ ದಂಡಾಧಿಕಾರಿಗಳ ಸಮಾನ ಅಧಿಕಾರ ಹೊಂದಿದ್ದ ದರ್ಜೆಯನ್ನು ಕೆಳಗಿಳಿಸುವ ಮೂಲಕ ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜಿಜ್ಞಾಸೆ, ಗೊಂದಲವಾಗಿದ್ದು, ಇಬ್ಬರು ಡಿಸಿಪಿ, ಧಾರವಾಡ ಎಸ್‌ಪಿ ಹಾಗೂ ನೂತನ ಕಮೀಷನರ್ ಎಲ್ಲರೂ ಒಂದೇ ಸ್ಥರದ ಅಧಿಕಾರಿಗಳಾಗಿದ್ದಾರೆ. ಇದರಿಂದಾಗಿ ಸಮನ್ವಯತೆ ಕೊರತೆ ಎದುರಾಗಬಹುದು ಎಂಬ ಲೆಕ್ಕಾಚಾರ ಪೊಲೀಸ್ ಇಲಾಖೆಯಲ್ಲೇ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಕಮೀಷನರ್ ಆಗಿದ್ದ ಪಾಂಡುರAಗ ರಾಣೆ, ಎಂ.ಎನ್. ನಾಗರಾಜ, ಆರ್.ದಿಲೀಪ್, ಲಾಭೂರಾಮ್ ಹಾಗೂ ರಮಣ ಗುಪ್ತಾ ಡಿಜಿ, ಐಜಿ ಕೇಡರ್ ಅಧಿಕಾರಿಗಳಾಗಿದ್ದರು. ಆದರೆ, ಮೊಟ್ಟ ಮೊದಲ ಬಾರಿಗೆ ಐಜಿ ಕೇಡರ್ ಅಲ್ಲದ ಎಸ್‌ಪಿ ಸ್ತರದ ಅಧಿಕಾರಿಯನ್ನು ಕಮಿಷನರ್ ಆಗಿ ನಿಯೋಜಿಸಲಾಗಿದೆ. ಆದರೆ, `ಅಂಡರ್ ರೂಲ್ ೧೨ ಆಫ್ ಐಪಿಎಸ್ ೨೦೧೬’ರ ಪ್ರಕಾರ ಎಚ್‌ಎಜಿ ಪ್ಲಸ್ ಅಧಿನಿಯಮದ ಅಡಿ ಹೈಯರ್ ಅಡ್ಮಿನಿಸ್ಟೆçÃಟಿವ್ ಗ್ರೇಡ್ ಪ್ರಕಾರವೇ ರೇಣುಕಾ ಸುಕುಮಾರ ಅವರನ್ನು ನಿಯೋಜಿಸಲಾಗಿದೆ ಎಂಬುದನ್ನು ಸರ್ಕಾರ ಆದೇಶದಲ್ಲಿ ಉಲ್ಲೇಖಿಸಿದೆ.
ಸಮನ್ವಯ ಕೊರತೆ ಸಾಧ್ಯತೆ
ಮೊಟ್ಟ ಮೊದಲ ಬಾರಿಗೆ ಹು-ಧಾ ಕಮೀಷನರ್ ವ್ಯಾಪ್ತಿಗೆ ಮಹಿಳಾ ಆಯುಕ್ತರನ್ನು ನೇಮಿಸಲಾಗಿದ್ದು ಒಂದೆಡೆ ಚರ್ಚೆಗೆ ಗ್ರಾಸವಾಗುತ್ತಿದೆ. ಮತ್ತೊಂದೆಡೆ ಇಲಾಖೆ ತುಂಬೆಲ್ಲ ಸಮಾನ ಸ್ತರದ ಅಧಿಕಾರಿಗಳೇ ಇರುವುದರಿಂದ ಅವರವರಲ್ಲೇ ಸಮನ್ವಯದ ಕೊರತೆ ಏರ್ಪಟ್ಟು ಕಾನೂನು ಸುವ್ಯವಸ್ಥೆಗೆ ಧಕ್ಕೆ ಆದರೂ ಅಚ್ಚರಿ ಇಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿAದ ಆಯುಕ್ತರ ನೇಮಕ ಆಗಿರಲಿಲ್ಲ. ಆದರೆ, ಹು-ಧಾ ಕಮೀಷನರೇಟ್‌ಗೆ ರೇಣುಕಾ ಸುಕುಮಾರ ಅವರನ್ನೇ ಆಯುಕ್ತರನ್ನಾಗಿ ತರುವ ಉದ್ದೇಶದಿಂದಲೇ ಹುದ್ದೆಯನ್ನು ಮಾರ್ಪಡು ಮಾಡಲಾಯಿತಾ ಎಂಬ ಪ್ರಶ್ನೆ ಕಾಡುತ್ತಿದೆ.
ರೇಣುಕಾ ಸುಕುಮಾರ ಅವರನ್ನೇ ಏಕೆ ಪೊಲೀಸ್ ಕಮೀಷನರ್‌ರಾಗಿ ನೇಮಿಸಲಾಯಿತು. ಕಮೀಷನರೇಟ್ ಅನ್ನು ಡಿಗ್ರೇಡ್ ಮಾಡದೇ ಐಜಿ ಸ್ಥರದ ಅಧಿಕಾರಿಗಳನ್ನು ತರಬಹುದಿತ್ತು. ಆದರೂ ಎರಡು ತಿಂಗಳು ಕಾದು, ಕಾನೂನು ಮಾರ್ಪಾಡು ಮಾಡಿಕೊಂಡು ತಮಗೆ ಬೇಕಾದ ಅಧಿಕಾರಿಗಳನ್ನೇ ಕರೆತರುವ ಹಿತಾಸಕ್ತಿ ಯಾರಿಗಿತ್ತು…? ಯಾಕೆ..? ಎಂಬುದು ಜಿಜ್ಞಾಸೆಗೊಳಗಾಗಿದೆ.