ಹೆದ್ದಾರಿ ಟೋಲ್ ದರ ಏರಿಕೆ ಹಿಂಪಡೆದ ಹೆದ್ದಾರಿ ಪ್ರಾಧಿಕಾರ

ಟೋಲ್‌
Advertisement


ಬೆಂಗಳೂರು: ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ಹೆದ್ದಾರಿಯ ಶುಲ್ಕವನ್ನು ಹೆಚ್ಚಿಸುವ ತನ್ನ ಆದೇಶವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಿಂಪಡೆದಿದೆ. ಮಾ. 14ರಿಂದ ಈ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಆರಂಭ ಆಗಿದ್ದು, ಕೇವಲ 17 ದಿನಗಳಲ್ಲೇ ಶುಲ್ಕವನ್ನು ಪರಿಷ್ಕಕರಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಾಧಿಕಾರವು ತನ್ನ ಆದೇಶವನ್ನು ವಾಪಸ್ ಪಡೆದುಕೊಂಡಿದೆ.