12 ಲಕ್ಷ ಮೊತ್ತದ ಅಮೆರಿಕನ್ ಡೈಮಂಡ್ ಗಣೇಶ

Advertisement

ಹುಬ್ಬಳ್ಳಿ: ಛೋಟಾ ಬಾಂಬೆ ಎಂದು ಹೆಸರುವಾಸಿಯಾದ ಹುಬ್ಬಳ್ಳಿಯ ಕಲಾವಿದ ಮಹೇಶ ಮುರಗೋಡ ಹಾಗೂ ಸಹ ಕಲಾವಿದರ ಕೈಯಲ್ಲಿ ಮೂರು ತಿಂಗಳ ಕಾಲ ಅಮೆರಿಕನ್ ಡೈಮಂಡ್ ಹರಳುಗಳಿಂದ ತಯಾರಿಸಲಾದ ಗಣೇಶ ಮೂರ್ತಿ ಬೆಂಗಳೂರಿನ ರಾಜಾಜಿನಗರ ೨ನೇ ಹಂತ ಮಿಲ್ಕ ಕಾಲೋನಿಗೆ ಶುಕ್ರವಾರ ರೈಲು ಮೂಲಕ ತೆಗೆದುಕೊಂಡು ಹೋಗಲಾಯಿತು.
ಕಲಾವಿದ ಮಹೇಶ ಮುರಗೋಡ ಹಾಗೂ ತಂಡದವರು ನಿರ್ಮಿಸಿದ ೧೨ ಲಕ್ಷ ರೂ. ಮೌಲ್ಯದ ಅಮೇರಿಕನ್ ಡೈಮಂಡ ಹರಳುಗಳುಳ್ಳ ಈ ಮೂರ್ತಿ ೫.೭ ಅಡಿ ಎತ್ತರವಿದ್ದು, ಸುಮಾರು ೧೫೦ ಕೆಜಿ ತೂಕ ಹೊಂದಿದೆ.
ಮಿಲ್ಕ್ ಕಾಲೋನಿಯ ಸ್ವಸ್ತಿಕ್ ಯುವಕರ ಸಂಘದಿಂದ ಕಳೆದ ಆರು ತಿಂಗಳ ಹಿಂದೆಯೇ ಮೂರ್ತಿ ತಯಾರಿಸುವಂತೆ ತಿಳಿಸಿದ್ದರು. ಅದರಂತೆ ಗಣೇಶ ವಿಗ್ರಹದ ಮುಖ ಬಣ್ಣವನ್ನು ಒಳಗೊಂಡಿದ್ದು, ಬಾಕಿ ಎಲ್ಲವನ್ನು ಅಮೇರಿಕನ್ ಡೈಮಂಡ್ ಹರಳುಗಳಿಂದ ತಯಾರಿಸಲಾಗಿದೆ ಎಂದು ಕಲಾವಿದ ಮಹೇಶ ಮುರಗೋಡ ಹೇಳಿದರು.
ಸೆ.೧೮ ರಂದು ಗಣೇಶ ಮೂರ್ತಿಯನ್ನು ಸ್ವಸ್ತಿಕ್ ಯುವಕರ ಸಂಘದವರು ಪ್ರತಿಷ್ಠಾಪನೆ ಮಾಡಲಿದ್ದಾರೆ. ಗಣೇಶ ಮೂರ್ತಿಯಲ್ಲಿ ಒಂಬತ್ತು ಬಗೆಯ ನವರತ್ನ ಹರಳುಗಳಿಂದ ನಿರ್ಮಿಸಲಾಗಿದೆ. ಕಳೆದ ೧೧ ವರ್ಷಗಳಿಂದ ಅಮೇರಿಕನ್ ಹರಳುಗಳುಳ್ಳ ಮೂರ್ತಿಯನ್ನು ತಯಾರಿಸಿ ಕೊಡಲಾಗುತ್ತಿದೆ. ಮೂರ್ತಿಯಲ್ಲಿ ಸುಮಾರು ೬೦ ಸಾವಿರ ಅಮೇರಿಕನ್ ಡೈಮಂಡ ಹಾಗೂ ನವರತ್ನ ಹರಳುಗಳನ್ನು ಬಳಕೆ ಮಾಡಲಾಗಿದೆ ಎಂದರು ಮಹೇಶ.