2024ರ ಸರ್ಕಾರಿ ರಜೆ

Advertisement

ಬೆಂಗಳೂರು: ಕರ್ನಾಟಕದ ಸರ್ಕಾರದ 2024ನೇ ಸಾಲಿನ ಸರ್ಕಾರಿ ರಜೆ ದಿನಗಳ ಕರಡು ಪಟ್ಟಿ ಸಿದ್ಧವಾಗಿದೆ.
ರಾಜ್ಯ ಸರ್ಕಾರವು 2024ನೇ ಸಾಲಿನಲ್ಲಿ 2ನೇ ಶನಿವಾರ, 4ನೇ ಶನಿವಾರ ಹಾಗೂ ಭಾನುವಾರದ ರಜಾ ದಿನಗಳನ್ನು ಹೊರತುಪಡಿಸಿ ಒಟ್ಟು 21 ಸಾರ್ವತ್ರಿಕ ರಜಾ ದಿನಗಳು ಇರಲಿವೆ ಎಂದು ಹೇಳಿದೆ.

ಸಾರ್ವತ್ರಿಕ ರಜೆ ದಿನಗಳ ಪಟ್ಟಿ: 1) ಜನವರಿ 15, ಸೋಮವಾರ; ಮಕರ ಸಂಕ್ರಾಂತಿ 2) ಜನವರಿ 26, ಶುಕ್ರವಾರ; ಗಣರಾಜ್ಯೋತ್ಸವ 3) ಮಾರ್ಚ್ 8, ಶುಕ್ರವಾರ; ಮಹಾಶಿವರಾತ್ರಿ 4) ಮಾರ್ಚ್ 29, ಶುಕ್ರವಾರ; ಗುಡ್‌ ಫ್ರೈಡೇ 5) ಏಪ್ರಿಲ್ 9, ಮಂಗಳವಾರ; ಯುಗಾದಿ 6) ಏಪ್ರಿಲ್ 11, ಗುರುವಾರ; ರಂಜಾನ್ 7) ಮೇ 1, ಬುಧವಾರ; ಕಾರ್ಮಿಕರ ದಿನ 8) ಮೇ 10, ಶುಕ್ರವಾರ; ಬಸವ ಜಯಂತಿ/ ಅಕ್ಷಯ ತೃತೀಯ 9) ಜೂನ್ 17, ಸೋಮವಾರ; ಬಕ್ರೀದ್ 10) ಜುಲೈ 17, ಬುಧವಾರ; ಮೊಹರಂ 11) ಆಗಸ್ಟ್‌ 15, ಗುರುವಾರ; ಸ್ವಾತಂತ್ರ್ಯ ದಿನಾಚರಣೆ 12) ಸೆಪ್ಟೆಂಬರ್ 7, ಶನಿವಾರ; ಗಣೇಶ ಚತುರ್ಥಿ 13) ಸೆಪ್ಟೆಂಬರ್ 16, ಸೋಮವಾರ; ಈದ್ ಮಿಲಾದ್ 14) ಅಕ್ಟೋಬರ್ 2, ಬುಧವಾರ; ಗಾಂಧಿ ಜಯಂತಿ/ ಮಹಾಲಯ ಅಮಾವಾಸ್ಯೆ 15) ಅಕ್ಟೋಬರ್ 11, ಶುಕ್ರವಾರ; ಆಯುಧ ಪೂಜೆ 16) ಅಕ್ಟೋಬರ್ 17, ಗುರುವಾರ; ವಾಲ್ಮೀಕಿ ಜಯಂತಿ 17) ಅಕ್ಟೋಬರ್ 31, ಗುರುವಾರ; ನರಕ ಚತುರ್ದಶಿ 18) ನವೆಂಬರ್ 1, ಶುಕ್ರವಾರ; ಕನ್ನಡ ರಾಜ್ಯೋತ್ಸವ 19) ನವೆಂಬರ್ 2, ಶನಿವಾರ; ದೀಪಾವಳಿ 20) ನವೆಂಬರ್ 18, ಸೋಮವಾರ; ಕನಕ ಜಯಂತಿ 21) ಡಿಸೆಂಬರ್ 25, ಬುಧವಾರ; ಕ್ರಿಸ್‌ಮಸ್