24ರಂದು ನವಲಗುಂದಕ್ಕೆ ಸಿಎಂ ಆಗಮನ: ಚಕ್ಕಡಿ ರಸ್ತೆ ಉದ್ಘಾಟನೆ, ಆಶ್ರಯ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ

Advertisement

ಹುಬ್ಬಳ್ಳಿ: ಫೆ. 24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವಲಗುಂದಕ್ಕೆ ಆಗಮಿಸಲಿದ್ದು, ಆಶ್ರಯ ಯೋಜನೆ ಫಲಾನುಭವಿಗಳಿಗೆ ಹಕ್ಕು ಪತ್ರವಿತರಣೆ, ಚಕ್ಕಡಿ ರಸ್ತೆ ಉದ್ಘಾಟನೆ, 55 ಹೊಸ ಬಸ್ ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ರವಿವಾರ ಕಾರ್ಯಕ್ರಮ ನಡೆಯುವ ಸ್ಥಳ, ಆಶ್ರಯ ಮನೆ ನಿರ್ಮಾಣ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಇದೊಂದು ಅಭಿವೃದ್ಧಿ ಯೋಜನೆಗಳ ಜಾರಿ ಕಾರ್ಯಕ್ರಮ. ಶಾಸಕರಾದ ಕೋನರಡ್ಡಿ ಅವರ ಇಚ್ಛಾಶಕ್ತಿಯಂದ ಯೋಜನೆ ಜಾರಿಯಾಗುತ್ತಿದೆ. ಆಶ್ರಯ ಯೋಜನೆಯಡಿ 1200 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ, 50 ಬಸ್ ಉದ್ಘಾಟನೆ, ಚಕ್ಕಡಿ ರಸ್ತೆ ಉದ್ಘಾಟನೆ ನಡೆಯಲಿದೆ ಎಂದರು.
ಶಾಸಕ ಎನ್.ಎಚ್ ಕೋನರಡ್ಡಿ ಮಾತನಾಡಿ, ಒಟ್ಟು 2,100 ಆಶ್ರಯ ಫಲಾನುಭವಿಗಳಿಗೆ ಮನೆ ನಿರ್ಮಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ 1200 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ರೈತರ ಸಹಕಾರದಲ್ಲಿ 34 ಚಕ್ಕಡಿ ರಸ್ತೆ ನಿರ್ಮಾಣ ಮಾಡಲಾಗಿದ್ದು ಅವುಗಳನ್ನೂ ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ. 50 ಹೊಸ ಬಸ್‌ಗಳನ್ನು ಉದ್ಘಾಟಿಸುತ್ತಿರುವುದರಿಂದ ಬಸ್ಸಿನ ಕೊರತೆ ನೀಗಲಿದೆ ಎಂದರು.
ಜಿಲ್ಲಾಧಿಕಾರಿ ದಿವ್ಯಪ್ರಭ ಹಾಗೂ ಇತರ ಅಧಿಕಾರಿಗಳಿದ್ದರು.