31 ವರ್ಷಗಳ ಬಳಿಕ ಜ್ಞಾನವಾಪಿಯಲ್ಲಿ ಹಿಂದೂಗಳ ಪೂಜೆ!

Advertisement

ವಾರಣಾಸಿಯ ವಿವಾದಿತ ಜ್ಞಾನವಾಪಿ ಮಸೀದಿಯ ‘ವ್ಯಾಸ್ ಪರಿವಾರ್ ತೆಹಖಾನಾ’ದಲ್ಲಿ ಗುರುವಾರ ಮೊದಲ ಪೂಜೆಯನ್ನು ನಡೆಸಲಾಯಿತು, ವಾರಣಾಸಿ ಜಿಲ್ಲಾ ನ್ಯಾಯಾಲಯದ ತೀರ್ಪಿನ ನಂತರ, ಹಿಂದೂ ಪಕ್ಷವು ವಿವಾದಿತ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು, ಅರ್ಚಕರೊಬ್ಬರು ಬೆಳಿಗ್ಗೆ 3 ಗಂಟೆಯ ಸುಮಾರಿಗೆ ಪೂಜೆಯನ್ನು ನಡೆಸಿದರು, ನಂತರ ಆರತಿ ಮಾಡಿದರು. ಕೋರ್ಟ್​ ಆದೇಶ ನೀಡಿದ 8 ಗಂಟೆಯೊಳಗೆ ಜ್ಞಾನವಾಪಿಯಲ್ಲಿ ಪೂಜಾ ಕಾರ್ಯ ನಡೆದಿದೆ. ಇದಕ್ಕೂ ಮುನ್ನ ಕಾಶಿ ವಿಶ್ವನಾಥ ಟ್ರಸ್ಟ್ ಸಿಬ್ಬಂದಿಯಿಂದ ನೆಲಮಹಡಿ ಸ್ವಚ್ಛತಾ ಕಾರ್ಯ ನಡೆದಿದೆ. ಮೂಲ ದೇಗುಲ ಅರ್ಚಕರಾದ ಜಿತೇಂದ್ರನಾಥ ವ್ಯಾಸ್​ ಕುಟುಂಬದಿಂದ ಜ್ಞಾನವಾಪಿಯ ಪೂಜೆ ನಡೆದಿದೆ. ನೆಲಮಹಡಿಯಲ್ಲಿದ್ದ ಗಣೇಶ, ಲಕ್ಷ್ಮೀ ದೇವಿಗೆ ಅರ್ಚಕರು ಆರತಿ ಬೆಳಗಿದ್ದಾರೆ. ವಾರಾಣಸಿ ಡಿಎಂ, ಆಯುಕ್ತರ ಉಪಸ್ಥಿತಿಯಲ್ಲಿ ಪೂಜೆ ನೆರವೇರಿದೆ. ಆ ಬಳಿಕ ಪರಸ್ಪರ ಸಿಹಿ ಪ್ರಸಾದ ತಿನಿಸಿ ಹಿಂದೂ ಭಕ್ತರು ಸಂತಸ ಹಂಚಿಕೊಂಡಿದ್ದಾರೆ. ಪೂಜೆ ವೇಳೆ ಮಸೀದಿ ಆವರಣದಲ್ಲಿ ಜಿಲ್ಲಾಡಳಿತ ಬಿಗಿ ಭದ್ರತೆ ಕಲ್ಪಿಸಿತ್ತು.