ಬಿಜೆಪಿ – ಕಾಂಗ್ರೆಸ್ ಕಾನೂನು ಬಹಿರ ಕೃತ್ಯದ ಮೇಲೆ ಜೆಡಿಎಸ್ ಹದ್ದಿನ ಕಣ್ಣು

ಇಬ್ರಾಹಿಂ
Advertisement

ಹುಬ್ಬಳ್ಳಿ : ಚಿಲುಮೆ ಸಂಸ್ಥೆಗೆ ಮತದಾರರ ಪಟ್ಡಿ ಪರಿಷ್ಕರಣೆ ಕಾರ್ಯವಹಿಸಿರುವುದನ್ನು ಜೆಡಿಎಸ್ ಗಂಭೀರವಾಗಿ ಪರಿಗಣಿಸಿದೆ. ನನ್ನ ನೇತೃತ್ವದಲ್ಲಿಯೇ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಬಾಹಿರ ಚಟುವಟಿಕೆ ನಡೆಸುವುದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಚಿಗದೊಡ್ಡಪ್ಪ ಮಕ್ಕಳು. ಏನೂ ವ್ಯತ್ಯಾಸವಿಲ್ಲ ಎಂದ̧ರು ಮತದಾರರ ಪಟ್ಟಿ ಪರಿಷ್ಕರಣೆ ಕೇವಲ ಬೆಂಗಳೂರಿನಲ್ಲಿ ಮಾತ್ರ ವಹಿಸಿಕೊಟ್ಟಿಲ್ಲ ವಿಜಯಪುರ, ಹುಬ್ಬಳ್ಳಿ, ಧಾರವಾಡ, ಮಂಗಳೂರು ಸೇರಿದಂತೆ ಬೇರೆ ಬೇರೆ ಕಡೆಗೂ ವಹಿಸಿದ್ದಾರೆ. ಈಗಾಗಲೇ ನಮಗೆ ಬೇರೆ ಬೇರೆ ಮೂಲಗಳಿಂದ ಮಾಹಿತಿ ಬರುತ್ತಿದೆ. ಇದರಲ್ಲಿ ಎರಡೂ ಪಕ್ಷಗಳೂ ಶಾಮೀಲಾಗಿವೆ ಎಂದು ಇಬ್ರಾಹಿಂ ಆರೋಪಿಸಿದರು.
ಈ ಎರಡೂ ಪಕ್ಷಗಳು ನಡೆಸುವ ಕಾನೂನು ಬಾಹಿರ ಕೃತ್ಯಗಳ ಮೇಲೆ ಕಣ್ಣಿಡಲು ಜೆಡಿಎಸ್ ಎರಡು ವಾರ್ ರೂಮ್ ರಚನೆ ಮಾಡಿದೆ. ಒಂದು ವಾರ್ ರೂಮ್ ಗೆ ನಿವೃತ್ತ ನ್ಯಾಯಾಧೀಶರು ಅಧ್ಯಕ್ಷರಾಗಿದ್ದಾರೆ. ಇವರಡಿ 400 ಜೆಡಿಎಸ್ ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಏನೇನು ಕಾನೂನು ಬಾಹಿರ ಕೆಲಸ ಮಾಡುತ್ತವೆ ಅಂಥವುಗಳ ಬಗ್ಗೆ ಮಾಹಿತಿ ಕಲೆ ಹಾಕಿ ಚುನಾವಣಾ ಆಯೋಗಕ್ಕೆ, ಕೋರ್ಟಿಗೆ ಒದಗಿಸುವ ಕೆಲಸ ಮಾಡಲಿದೆ ಎಂದರು.
ಜೆಡಿಎಸ್ ಪಂಚರತ್ನ ಕಾರ್ಯಕ್ರಮಗಳು ಸರ್ವರಿಗೂ ಪಾಲು ಸರ್ವರಿಗೂ ಸಮಬಾಳು ಎಂಬ ಧ್ಯೇಯೊದ್ದೇಶ ಒಳಗೊಂಡಿದೆ. ಭಾರಿ ಜನಬೆಂಬಲ, ಮೆಚ್ಚುಗೆ ವ್ಯಕ್ತವಾಗಲಿದೆ . ಹಳೇ ಮೈಸೂರು ಭಾಗದಲ್ಲಿ ಶೇ 70 ಮತ ಜೆಡಿಎಸ್ ಪರ ಬರುವುದು ಖಾತ್ರಿ ಇದೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ವ್ಯಾಪಕ ಸ್ಪಂದನೆ ಇದೆ. ಈ ಎರಡೂ ಭಾಗದಲ್ಲಿ 40 ಕ್ಕೂ ಹೆಚ್ಚು ಸ್ಥಾನಗಳು ಜೆಡಿಎಸ್ ಗೆ ಲಭಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.