8 ವರ್ಷದ ಪೋರ: ಶಿವಮೊಗ್ಗ ಪೊಲೀಸ

Advertisement

ಶಿವಮೊಗ್ಗ: ಎಂಟೂವರೆ ವರ್ಷದ ಬಾಲಕ ಪೊಲೀಸ್​ ಇನ್ಸ್​ಪೆಕ್ಟ್​​ರ್​ ಆಗಿ ಕರ್ತವ್ಯ ನಿರ್ವಹಿಸಿದ ಘಟನೆ ನಡೆದಿದೆ. ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಂಟೂವರೆ ವರ್ಷದ ಪುಟ್ಟ ಬಾಲಕ ಪೊಲೀಸ್ ಆಗಿ ಒಂದು ಗಂಟೆ ಕರ್ತವ್ಯ ನಿರ್ವಹಿಸಿದ್ದಾನೆ. ಈ ಕುರಿತು ಶಿವಮೊಗ್ಗ ಎಸ್‌ಪಿ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿದ್ದಾರೆ ” ಆಜಾನ್ ಖಾನ್ 8ವರ್ಷ ಶಿವಮೊಗ್ಗ ಟೌನ್ ಈ ಬಾಲಕನು ಹೃದಯಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ಪೊಲೀಸ್ ಅಧಿಕಾರಿಯಾಗಬೇಕೆಂಬ ಇಚ್ಛೆ ಇರುತ್ತದೆ. ಆತನ ಹಾಗೂ ಪೋಷಕರ ಕೋರಿಕೆ ಮೇರೆಗೆ ಈ ದಿನ ದೊಡ್ಡಪೇಟೆ ಠಾಣೆಯಲ್ಲಿ ಬಾಲಕನಿಗೆ ಪೊಲೀಸ್ ಅಧಿಕಾರಿ ಸಮವಸ್ತ್ರವನ್ನು ಧರಿಸಿ, PI ಹುದ್ದೆಯನ್ನು ಸಂಕೇತಿಕವಾಗಿ ಅಲಂಕರಿಸಲು ಅವಕಾಶ ಮಾಡಿಕೊಡಲಾಯಿತು” ಎಂದಿದ್ದಾರೆ.