ಮಾರ್ಚ8 ಮತ್ತು 11 ರಂದು ಚಿಗರಿ ಇರಲ್ಲ

Advertisement

ಹುಬ್ಬಳ್ಳಿ: ಓಕುಳಿ ದಿನವಾದ ಮಾ.8 ಹಾಗೂ ರಂಗಪಂಚಮಿಯ ದಿನವಾದ 11 ರಂದು ಹುಬ್ಬಳ್ಳಿ-ಧಾರವಾಡ ನಡುವೆ ಬಿಆರ್‌ಟಿಎಸ್ (ಚಿಗರಿ) ಬಸ್ ಸಂಚಾರ ಬಹುತೇಕ ಸ್ತಬ್ಧವಾಗಲಿದೆ.
`ಅಂದು ಬೆಳಿಗ್ಗೆ ೬ರಿಂದ ಸಂಜೆ ೫ ಗಂಟೆಯವರೆಗೆ ಅವಳಿನಗರದ ನಡುವೆ ಚಿಗರಿ ಓಡಾಟ ಇರುವುದಿಲ್ಲ. ಸಂಜೆ ಪ್ರಯಾಣಿಕರ ದಟ್ಟಣೆಯನ್ನು ಅವಲಂಬಿಸಿ ಕಾರ್ಯಾಚರಣೆ ಆರಂಭಿಸುವ ಬಗ್ಗೆ ಪರಿಶೀಲಿಸಲಾಗುವುದು’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಗರ ವಿಭಾಗ ತಿಳಿಸಿದೆ.
ಬಿಆರ್‌ಟಿಎಸ್ ಬಸ್‌ಗಳ ಮಾಸಿಕ ಸ್ಮಾರ್ಟ್ ಕಾರ್ಡ್ಗಳನ್ನು ಹೊಂದಿರುವ ಪ್ರಯಾಣಿಕರಿಗೆ ಮಾ. 8 ಹಾಗೂ 11 ರ ಮಟ್ಟಿಗೆ ಮಿಶ್ರ ಪಥದಲ್ಲಿ ಅವಳಿನಗರ ನಡುವೆ ಸಂಚರಿಸುವ ವಾಯವ್ಯ ಸಾರಿಗೆ ಸಂಸ್ಥೆಯ ಇತರ ಬಸ್‌ಗಳಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅದು ಹೇಳಿದೆ.
ಕಳೆದ ವರ್ಷದವರೆಗಿನ ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ, ಹುಬ್ಬಳ್ಳಿಯ ರಂಗಪಂಚಮಿ ದಿನ ಅವಳಿನಗರ ನಡುವೆ ಚಿಗರಿ ಬಸ್ ಸಂಚಾರ, ಬಣ್ಣದಾಟ ಮುಗಿದ ಮೇಲೆಯೂ ಇರುತ್ತಿರಲಿಲ್ಲ. ಆದರೆ ಬಣ್ಣದಾಟ ಮುಗಿದ ಮೇಲೆ (ಮಧ್ಯಾಹ್ನ ೩ರ ಸುಮಾರು) ಮಿಶ್ರ ಪಥದಲ್ಲಿನ ಇತರ ಸಾಮಾನ್ಯ ಬಸ್‌ಗಳ ಓಡಾಟ ಆರಂಭವಾಗುತ್ತಿತ್ತು.