ಮುರುಘಾ ಶ್ರೀಗಳ ಸೇವೆ ಯಾರೂ ತಳ್ಳಿ ಹಾಕುವಂತಿಲ್ಲ,ಏನಾಗಿದೆಯೋ ಸತ್ಯಾಂಶ ಗೊತ್ತಿಲ್ಲ;ಡಿ.ಕೆ ಶಿವಕುಮಾರ್​

Advertisement

ಬೆಂಗಳೂರು: ಚಿತ್ರದುರ್ಗ ಮುರುಘಾ ಮಠದ ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಾಗಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುರುಘಾ ಶ್ರೀಗಳ ಸೇವೆ ಯಾರೂ ತಳ್ಳಿ ಹಾಕುವಂತಿಲ್ಲ. ಏನಾಗಿದೆಯೋ ಸತ್ಯಾಂಶ ಗೊತ್ತಿಲ್ಲ. ನಮಗೆ ಕಾಣುವುದು ಅವರು ಮಾಡಿದ ಸೇವೆಯಷ್ಟೇ. ದೇಶದ ಎಲ್ಲಾ ನಾಯಕರು ಅವರನ್ನು ಹಾಡಿ ಹೊಗಳಿದ್ದಾರೆ. ಒಳಗಡೆ ಏನು ಷಡ್ಯಂತ್ರ ನಡೆಯುತ್ತಿದೆ ಗೊತ್ತಿಲ್ಲ ಎಂದರು.

ಇನ್ನು ರಾಮನಗರ ಹೆದ್ದಾರಿ ಜಲಾವೃತಗೊಂಡ ಬಗ್ಗೆ ಮಾತನಾಡಿದ ಅವರು, ೪೦% ಕಮಿಷನ್ ಹೊಡೆಯೋದಷ್ಟೇ ಬಿಜೆಪಿಯವರ ಕೆಲಸ. ಪ್ರಧಾನಿ ಕರೆಸಲು ನೂರಾರು ಕೋಟಿ ಮೀಸಲಿಟ್ಟಿದ್ದಾರೆ. ಯಾರನ್ನಾದರೂ ಕರೆಸಲಿ, ಹಾರ ತುರಾಯಿ ಹಾಕಿಸಲಿ. ಆದರೆ ಅವರ ಬಣ್ಣ ಈಗ ಬಯಲಾಗಿದೆಯಲ್ಲ ಎಂದು ಸಂಸದ ಪ್ರತಾಪ್​ ಸಿಂಹ ವಿರುದ್ಧ ಕಿಡಿಕಾರಿದ್ದಾರೆ.