ಮಂಗಳೂರು: ಸಿಇಐಆರ್ ಮೂಲಕ ಮೊಬೈಲ್‌ ಪತ್ತೆ

Advertisement

ಮಂಗಳೂರು : ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ 39 ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ಗುರುವಾರ ಅದರ ವಾರೀಸುದಾರರಿಗೆ ಮರಳಿಸಲಾಯಿತು .ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಆಯುಕ್ತ ಕುಲದೀಪ್ ಆರ್.ಜೈನ್ ಅವರು ಮೊಬೈಲ್‌ಗಳ ವಾರೀಸುದಾರರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರುಮಂಗಳೂರು ನಗರದಲ್ಲಿ ಈವರೆಗೆ 402 ಮೊಬೈಲ್‌ಗಳು ಕಳೆದುಹೋಗಿರುವ ಬಗ್ಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು 124 ಮೊಬೈಲ್‌ಗಳನ್ನು ಪತ್ತೆ ಹಚ್ಚಲಾಗಿದೆ. ಇದರಲ್ಲಿ 39 ಮೊಬೈಲ್‌ಗಳನ್ನುವಶಪಡಿಸಿಕೊಂಡು ಇಂದು ಅದರ ವಾರೀಸುದಾರರಿಗೆ ಮರಳಿಸಲಾಗಿದೆ. ಉಳಿದಂತೆ ವಶಪಡಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ. ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೆ ತಂದಿರುವ ಸೆಂಟ್ರಲ್ ಇಕ್ಯುಪ್‌ಮೆಂಟ್ ಐಡೆಂಟಿ ರಿಜಿಸ್ಟ್ರೇಶನ್ ಪೋರ್ಟಲ್ ( ಸಿಇಐಆರ್) ಮೂಲಕ ಇವುಗಳನ್ನು ಪತ್ತೆಹಚ್ಚಲಾಗಿದೆ ಎಂದರು.ಡಿಸಿಪಿಗಳಾದ ಅಂಶು ಕುಮಾರ್ ಹಾಗೂ ದಿನೇಶ್ ಕುಮಾರ್ ಉಪಸ್ಥಿತರಿದ್ದರು.