ಸಿರಿಧಾನ್ಯ ಸಮ್ಮೇಳನ ಜಾಗತಿಕ ಒಳಿತಿಗಾಗಿ: ಮೋದಿ

ಶ್ರೀ ಅನ್ನ
Advertisement

ಕೇಂದ್ರ ಕೃಷಿ ಅನುಸಂಧಾನ ರಾಷ್ಟ್ರೀಯ ಪರಿಷತ್ ದೆಹಲಿಯಲ್ಲಿಂದು ಆಯೋಜಿಸಿರುವ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ ಮತ್ತು ಶ್ರೀ ಅನ್ನ ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿ. ದೇಶ – ವಿದೇಶಗಳಿಂದ ಆಗಮಿಸಿರುವ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು ‘ಭಾರತದ ಪ್ರಸ್ತಾವನೆ ಮತ್ತು ಪ್ರಯತ್ನಗಳ ನಂತರ, ವಿಶ್ವಸಂಸ್ಥೆಯು 2023 ಅನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ’ ಎಂದು ಘೋಷಿಸಿರುವುದು ದೇಶಕ್ಕೆ ಸಂದಿರುವ ಗೌರವದ ವಿಷಯವಾಗಿದೆ” ಎಂದು ಹೇಳಿದರು. ಪ್ರಧಾನಿಯವರು ಕಸ್ಟಮೈಸ್ ಮಾಡಿದ ಅಂಚೆಚೀಟಿ ಹಾಗೂ ರೂಪಾಯಿ ಕರೆನ್ಸಿ ನಾಣ್ಯವನ್ನು ಅನಾವರಣಗೊಳಿಸಿದ ಅವರು ಸಿರಿಧಾನ್ಯ ಅಥವಾ ಶ್ರೀ ಅನ್ನವನ್ನು ಜಾಗತಿಕ ಆಂದೋಲನವಾಗಿ ಉತ್ತೇಜಿಸಲು ಭಾರತ ನಿರಂತರವಾಗಿ ಕೆಲಸ ಮಾಡುತ್ತಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳಿಲ್ಲದೆ ಸಿರಿಧಾನ್ಯವನ್ನು ಸುಲಭವಾಗಿ ಬೆಳೆಯಬಹುದು. ಭಾರತದ ಸಿರಿಧಾನ್ಯ ಮಿಷನ್ ದೇಶದ 2.5 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರಯೋಜನವನ್ನು ನೀಡುತ್ತದೆ’ ಎಂದು ಹೇಳಿದರು.