ವಿಜಯಪುರ: ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ ನಗದು, ಚಿನ್ನ ವಶ

Advertisement

ವಿಜಯಪುರ : ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ ನಗದು ಹಾಗೂ ಚಿನ್ನವನ್ನು ವಿಜಯಪುರ ನಗರದ ಹೊರ ಭಾಗದಲ್ಲಿನ ಜಮಖಂಡಿ ರಸ್ತೆಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಗರದ ಹೊರ ಭಾಗದಲ್ಲಿ ಸ್ಥಾಪಿಸಲಾಗಿರುವ ಜಮಖಂಡಿ ರಸ್ತೆಯ ಚೆಕ್ ಪೋಸ್ಟ್ ಬಳಿ ಕಾರಿನಲ್ಲಿ ದಾಖಲಾತಿ ಇಲ್ಲದೇ ಸಾಗಾಟ ಮಾಡುತ್ತಿದ್ದ 10 ಲಕ್ಷ 30 ಸಾವಿರ ರೂಪಾಯಿ ನಗದು ಹಾಗೂ 60 ಗ್ರಾಂ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಗಾಂಧಿಚೌಕ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಿದ್ದೇಶ ಮುರುಗುಂಡಿ ನೇತೃತ್ವದಲ್ಲಿ ತಪಾಸಣೆ ಮಾಡಿ ಕೆಎ 28 ಝಡ್ 8645 ನಂಬರಿನ ಕಾರ್ ಹಾಗೂ ಕಾರಿನಲ್ಲಿದ್ದ ನರೇಂದ್ರ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಈ ಕುರಿತು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.